ವಿದೇಶ

ಕೊರೋನಾಗೆ ಮಾಡರ್ನಾ ಲಸಿಕೆ ಪಡೆದ ವೈದ್ಯರಿಗೆ ಎದುರಾಯ್ತು ಅಲರ್ಜಿ ಸಮಸ್ಯೆ! 

Srinivas Rao BV

ವಾಷಿಂಗ್ ಟನ್: ಜಗತ್ತು ಕೊರೋನಾ ವೈರಸ್ ಗೆ ಲಸಿಕೆಯನ್ನು ಎದುರುನೋಡುತ್ತಿದ್ದು,  ಅಮೆರಿಕಾದಲ್ಲಿ ಮಾಡರ್ನಾ ಲಸಿಕೆಯನ್ನು ಪಡೆದ ಬೋಸ್ಟನ್ ನ ವೈದ್ಯರೊಬ್ಬರಿಗೆ ಅಲರ್ಜಿ ಸಮಸ್ಯೆ ಎದುರಾಗಿದೆ.

ಬೋಸ್ಟಾನ್ ವೈದ್ಯಕೀಯ ಕೆಂದ್ರದ ಜೆರಿಯಾಟ್ರಿಕ್ ಆಂಕೊಲಾಜಿ ಸಹೋದ್ಯೋಗಿ ಡಾ. ಹೊಸೆನ್ ಸದರ್ಜಾದೆ ವೈದ್ಯರು ಕೊರೋನಾಗೆ ಲಸಿಕೆಯನ್ನು ಪಡೆದಿದ್ದರು. ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ ಅವರಿಗೆ ಲಸಿಕೆ ನೀಡುತ್ತಿದ್ದಂತೆಯೇ ಹೃದಯ ಬಡಿತ ಹೆಚ್ಚಾಗಿ ತಲೆತಿರುಗುವಿಕೆ ಉಂಟಾಯಿತು. ತಕ್ಷಣವೇ ತೀವ್ರತರವಾದ ಪರಿಣಾಮ ಎದುರಾಯಿತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಟಿಸಿದೆ. 

ಮಾಡರ್ನಾ ಲಸಿಕೆ ರಾಷ್ಟ್ರವ್ಯಾಪಿ ಬಳಕೆಯ ಮೊದಲನೇ ವಾರದಲ್ಲಿದ್ದು, ಇದೇ ಮೊದಲ ಬಾರಿಗೆ ಅದರ ತೀವ್ರತರ ಅಡ್ಡ ಪರಿಣಾಮದ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಲಭ್ಯವಾಗಿದೆ. 

ಬೋಸ್ಟಾನ್ ನ ವೈದ್ಯಕೀಯ ಕೇಂದ್ರದ ವಕ್ತಾರ ಡೇವಿಡ್ ಕಿಬ್ಬ್ ಈ ಬಗ್ಗೆ ಮಾಹಿತಿ ನೀಡಿದ್ದು, ಡಾ. ಹೊಸೆನ್ ಸದರ್ಜಾದೆಗೆ ಅಲರ್ಜಿ ತೀವ್ರವಾದಾಗ, ಅವರನ್ನು ತುರ್ತು ವಿಭಾಗಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಈಗ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಪಿಫೈಜರ್ ಲಸಿಕೆಯನ್ನು ಪಡೆದು ಅದರ ಮೂಲಕ ಅಡ್ಡಪರಿಣಾಮಗಳನ್ನು ಎದುರಿಸುತ್ತಿರುವವರ ಪ್ರಕರಣಗಳ ಮೇಲೆ ಎಫ್ ಡಿಎ ನಿಗಾ ವಹಿಸುತ್ತಿದೆ.

SCROLL FOR NEXT