ವಿದೇಶ

ಕೊರೋನಾವೈರಸ್ ನಿಂದ ವಿಶ್ವ ರಕ್ಷಿಸಲು ತನ್ನ ಪ್ರಜೆಗಳನ್ನೇ ನಿರಾಶ್ರಿತರನ್ನಾಗಿಸಿದ ಚೀನಾ

Manjula VN

ಕೊರೋನಾ ಕೇಂದ್ರ ಬಿಂದು ಹುಬೆ ಪ್ರಾಂತ್ಯದಲ್ಲಿ ಎಲ್ಲವನ್ನೂ ನಿಷೇಧಿಸಿದ ಚೀನಾ: ರೋಗಿಗಳಾರೂ ಹೊರ ಹೋಗುವಂತಿಲ್ಲ

ಬೀಜಿಂಗ್: ಪ್ರತೀನಿತ್ಯ 60 ರಿದಂ 70 ಮಂದಿಯನ್ನು ಬಲಿಪಡೆದುಕೊಂಡು ಜಾಗತಿಕವಾಗಿ ಭೀತಿ ಹುಟ್ಟಿಸುತ್ತಿರುವ ಮಾರಕ ಕೊರೋನಾ ವೈರಸ್ ವಿಶ್ವದಾದ್ಯಂತ ವ್ಯಾಪಿಸುವುದನ್ನು ತಪ್ಪಿಸಲು ಚೀನಾ ತನ್ನ ಒಂದು ಪ್ರಾಂತ್ಯವನ್ನೇ ತ್ಯಾಗ ಮಾಡಿಬಿಟ್ಟಿದೆ. ಕೊರೋನಾ ವೈರಸ್ ಹರಡದಂತೆ ಮಾಡಲು ತನ್ನದೇ ಪ್ರಜೆಗಳನ್ನು ನಿರಾಶ್ರಿತರನ್ನಾಗಿ ಮಾಡಿದೆ. 

ಮೊದಲ ಬಾರಿಗೆ ಕೊರೋನಾವೈರಸ್ ಕಂಡು ಬಂದಿದ್ದು, 6 ಕೋಟಿ ಜನಸಂಖ್ಯೆ ಇರುವ ಚೀನಾದ ಹುಬೆ ಪ್ರಾಂತ್ಯದಲ್ಲಿ. ವೈರಾಣು ಸೋಂಕು ತೀವ್ರಗೊಳ್ಳುತ್ತಿದ್ದಂತೆ ಜ.2ರಿಂದ ಆ ಪ್ರಾಂತ್ಯವನ್ನು ಚೀನಾ ಅಕ್ಷರಶಃ ಮುಚ್ಚಿಸಿದೆ. ಜನರ ಮುಕ್ತ ಓಡಾಟಕ್ಕೆ ನಿರ್ಬಂಧ ಹೇರಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಕಾರ್ಯಕ್ರಮ, ಸಮಾವೇಶಗಳನ್ನು ನಿಷೇಧಿಸಿದೆ. 

ಒಂದು ವೇಳೆ ಜನರ ಮುಕ್ತ ಸಂಚಾರಕ್ಕೆ ಚೀನಾ ಏನಾದರೂ ಅನುವು ಮಾಡಿಕೊಟ್ಟಿದ್ದರೆ ಹುಬೆ ಪ್ರಾಂತ್ಯದ ಚೀನಿಯರು ದೇಶದ ಇತರೆ ಭಾಗಗಳಿಗೆ ಚಿಕಿತ್ಸೆಗಾಗಿ ತೆರಳುತ್ತಿದ್ದರು. ಇಡೀ ವಿಶ್ವದಾದ್ಯಂತ ಈ ಸೋಂಕು ವ್ಯಾಪಿಸುವ ಅಪಾಯವಿತ್ತು. ಆದರೆ ಹುಬೆ ಪ್ರಾಂತ್ಯವನ್ನು ಬಂದ್ ಮಾಡುವ ಮೂಲಕ ಚೀನಾ, ಈ ಅಪಾಯವನ್ನು ತಪ್ಪಿಸಿದೆ ಎಂದು ಹೇಳಲಾಗುತ್ತಿದೆ. 

ಮತ್ತೊಂದೆಡೆ ಹುಬೆ ಪ್ರಾಂತ್ಯದ ಜನರಿಗಾಗಿ ಚೀನಾ ತನ್ನ ವಿವಿಧ ಭಾಗಗಳ 8000 ಆರೋಗ್ಯ ಸಿಬ್ಬಂದಿಯನ್ನು ಅಲ್ಲಿಗೆ ರವಾನಿಸಿದೆ. ಹುಬೆ ಪ್ರಾಂತ್ಯದ ವುಹಾನ್ ನಲ್ಲಿ 27 ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. 2600 ಹಾಸಿಗೆ ಸಾಮರ್ಥ್ಯದ 2 ಆಸ್ಪತ್ರೆಗಳನ್ನು 2000 ಕಾರ್ಮಿಕರನ್ನು ಬಳಸಿ ಹತ್ತೇ ದಿನದಲ್ಲಿ ನಿರ್ಮಿಸಿದೆ. ವೈದ್ಯರಿಗೆ ಮುಖಗವಸು, ಕೈಗವರಸು ಹಾಗೂ ರಕ್ಷಣಾ ಸಮವಸ್ತ್ರ ಧರಿಸಿ ಕೆಲಸ ಮಾಡಲು ಸೂಚಿಸಿದೆ. ಇಲ್ಲಿ ವೈದ್ಯರು ಕಳೆದ ಕೆ ವಾರಗಳಿಂದ ನಿದ್ರೆಗೆಟ್ಟು ಕೆಲಸ ಮಾಡುತ್ತಿದ್ದಾರೆ. 

SCROLL FOR NEXT