ವಿದೇಶ

ಕರೋನಾ ವೈರಸ್ ಭೀತಿ: ಉತ್ತರ ಕೊರಿಯಾದ ಉನ್ನತ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆ! 

Srinivas Rao BV

ಉತ್ತರ ಕೊರಿಯಾದಲ್ಲಿ ಕರೋನಾ ವೈರಸ್ ಶಂಕೆ ಹಿನ್ನೆಲೆ ಪ್ರತ್ಯೇಕ ಸ್ಥಳದಿಂದ ತಪ್ಪಿಸಿಕೊಂಡಿದ್ದ ಉನ್ನತ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 

ಇತ್ತೀಚಿನ ದಿನಗಳಲ್ಲಿ ಚೀನಾಗೆ ಭೇಟಿ ನೀಡಿ ಬಂದವರು, ಚೀನಾ ಜನರ ಜೊತೆ ಸಂಪರ್ಕದಲ್ಲಿದ್ದವರನ್ನು 30 ದಿನಗಳ ಕಾಲ ಪ್ರತ್ಯೇಕ ಸ್ಥಳದಲ್ಲಿರುವಂತೆ ಉತ್ತರ ಕೋರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆದೇಶ ನೀಡಿದ್ದಾರೆ. 

ಚೀನಾಗೆ ಕಿಮ್ ಜಾಂಗ್- ಉನ್ ಜೊತೆ ತೆರಳಿದ್ದ ಉತ್ತರ ಕೊರಿಯಾ ಉನ್ನತ ಅಧಿಕಾರಿಯನ್ನು ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿತ್ತು. ಆದರೆ ಆದೇಶ ಉಲ್ಲಂಘನೆ ಮಾಡಿ ಜಮೀನಿನ ಪ್ರದೇಶದಲ್ಲಿರುವ ನೀರಿನಲ್ಲಿ ಸ್ನಾನಕ್ಕೆ ತೆರಳಿದ್ದಾನೆ. ಈ ಮಾಹಿತಿಯನ್ನು ಪಡೆದ ಉತ್ತರ ಕೊರಿಯಾ ಸರ್ಕಾರ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿದೆ. 

ಉತ್ತರ ಕೊರಿಯಾದಲ್ಲಿ ಈ ವರೆಗೂ ಕರೋನಾ ವೈರಸ್ ನ ಯಾವುದೆ ಪ್ರಕರಣಗಳೂ ಪತ್ತೆಯಾಗಿಲ್ಲ.  ಉತ್ತರ ಕೊರಿಯಾ ಚೀನಾದೊಂದಿಗೆ 880 ಮೈಲಿ ಉದ್ದದ ಗಡಿ ಹಂಚಿಕೊಂಡಿದ್ದು, ಕರೋನಾ ವೈರಸ್ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳುತ್ತಿದೆ. 

SCROLL FOR NEXT