ಡೇರಾ ಬುಗ್ತಿ: ಬಲೂಚಿಸ್ತಾನ್ ಲಿಬರೇಶನ್ ಟೈಗರ್ಸ್ ಹೋರಾಟಗಾರರು ಪಾಕಿಸ್ತಾನದ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದು, ದಾಳಿಯಲ್ಲಿ 16 ಮಂದಿ ಯೋಧರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಿಂಗ್ಸಿಲಾ ಪ್ರದೇಶದಲ್ಲಿರುವ ಪಾಕಿಸ್ತಾನದ ಸೇನಾ ಶಿಬಿರದ ಮೇಲೆ ಹೋರಾಟಗಾರರು ದಾಳಿ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.
ದಾಳಿ ವೇಳೆ ಸೇನಾ ಶಿಬಿರದಲ್ಲಿದ್ದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ಹೋರಾಟಗಾರರು ವಶಪಡಿಸಿಕೊಂಡಿದ್ದು, ಇವುಗಳಿಂದ ಶಿಬಿರದ ಮೇಲೆ ದಾಳಿ ದಾಳಿ ಮಾಡಿದ್ದಾರೆಂದು ತಿಳಿದುಬಂದಿದೆ.
ಹೋರಾಟಗಾರರು ಸೇನಾ ಶಿಬಿರದ ಮೇಲೆ ದಾಳಿ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೋರಾಟಗಾರರು ಹೇಳಿಕೆ ನೀಡಿರುವ ಪ್ರಕಾರ, ದಾಳಿಯಲ್ಲಿ ಸೇನೆಗೆ ಸೇರಿದ ಎರಡು ವಾಹನಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ದಾಳಿ ಬಗ್ಗೆ ಪಾಕಿಸ್ತಾನ ಸೇನೆ ಯಾವುದೇ ಮಾಹಿತಿಗಳನ್ನು ನೀಡಿಲ್ಲ.