ಲ್ಯಾರಿ ಟೆಸ್ಲರ್ 
ವಿದೇಶ

'ಕಟ್-ಕಾಪಿ-ಪೇಸ್ಟ್' ಜನಕ ಲ್ಯಾರಿ ಟೆಸ್ಲರ್​ ನಿಧನ

 ಜಗದ್ವಿಖ್ಯಾತ ಕಂಪ್ಯೂಟರ್ ವಿಜ್ಞಾನಿಬ್ರಾಂಕ್ಸ್ ಮೂಲದ ಲಾರೆನ್ಸ್ "ಲ್ಯಾರಿ ಟೆಸ್ಲರ್​ತಮ್ಮ  74 ನೇ ವಯಸ್ಸಿನಲ್ಲಿ ನಿಧನರಾದರು, ಕಂಪ್ಯೂಟರ್ ತಂತ್ರಜ್ಞಾನದಲ್ಲಿ ನಾವೆಲ್ಲಾ ಬಳಸುವ "ಕಟ್, ಕಾಪಿ ಮತ್ತು ಪೇಸ್ಟ್" ಗಳನ್ನು ಜನಪ್ರಿಯಗೊಳಿಸಿದ್ದ ಲ್ಯಾರಿ ಈ ವಾರ ನಿಧನರಾದರೆಂದು ಖ್ಯಾತ ಸಂಸ್ಥೆ ಜೆರಾಕ್ಸ್ ವರದಿ ಮಾಡಿದೆ

ಸ್ಯಾನ್ ಫ್ರಾನ್ಸಿಸ್ಕೋ: ಜಗದ್ವಿಖ್ಯಾತ ಕಂಪ್ಯೂಟರ್ ವಿಜ್ಞಾನಿಬ್ರಾಂಕ್ಸ್ ಮೂಲದ ಲಾರೆನ್ಸ್ "ಲ್ಯಾರಿ ಟೆಸ್ಲರ್​
ತಮ್ಮ  74 ನೇ ವಯಸ್ಸಿನಲ್ಲಿ ನಿಧನರಾದರು, ಕಂಪ್ಯೂಟರ್ ತಂತ್ರಜ್ಞಾನದಲ್ಲಿ ನಾವೆಲ್ಲಾ ಬಳಸುವ "ಕಟ್, ಕಾಪಿ ಮತ್ತು ಪೇಸ್ಟ್" ಗಳನ್ನು ಜನಪ್ರಿಯಗೊಳಿಸಿದ್ದ ಲ್ಯಾರಿ ಈ ವಾರ ನಿಧನರಾದರೆಂದು ಖ್ಯಾತ ಸಂಸ್ಥೆ ಜೆರಾಕ್ಸ್ ವರದಿ ಮಾಡಿದೆ

"ಕಟ್ / ಕಾಪಿ & ಪೇಸ್ಟ್, ಫೈಂಡ್ & ರಿಪ್ಲೇಸ್, ಮತ್ತು ಇನ್ನೂ ಹಲವಷ್ಟನ್ನು ಕಂಡುಹಿಡಿದ ಜೆರಾಕ್ಸ್ ಸಂಸ್ಥೆಯ ಮಾಜಿ ಸಂಶೋಧಕ ಲ್ಯಾರಿ ಟೆಸ್ಲರ್​  ಇನ್ನಿಲ್ಲ"ಕಂಪನಿ ಟ್ವೀಟ್ ಮಾಡಿದೆ.

"ನಿಮ್ಮ ಕೆಲಸದ ದಿನಗಳು ಹಾಗೂ  ಕ್ರಾಂತಿಕಾರಿ ವಿಚಾರಗಳಿಗೆಧನ್ಯವಾದಗಳು. ಲ್ಯಾರಿ ಸೋಮವಾರ ನಿಧನರಾದರು, ಆದ್ದರಿಂದ ಅವರಿಗೆ ಶ್ರದ್ದಾಂಜಲಿ ಆಚರಿಸಲು ನಮ್ಮೊಂದಿಗೆ ಸೇರಿಕೊಳ್ಳಿ."

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದ ಲ್ಯಾರಿ ಮಾನವ-ಕಂಪ್ಯೂಟರ್ ಸಂವಹನದಲ್ಲಿ ಪರಿಣತಿ ಹೊಂದಿದ್ದರು. ಅಮೆಜಾನ್, ಆಪಲ್, ಯಾಹೂ ಮತ್ತು ಜೆರಾಕ್ಸ್ ಪಾಲೊ ಆಲ್ಟೊ ಸಂಶೋಧನಾ ಕೇಂದ್ರದಲ್ಲಿ (ಪಿಎಆರ್ಸಿ) ತನ್ನ ವೃತ್ತಿಜೀವನದಲ್ಲಿ ಸೇವೆ ಸಲ್ಲಿಸಿದ್ದರು. ಕಟ್ ಆಂಡ್ ಪೇಸ್ಟ್ಕಮಾಂಡ್ ಗಳನ್ನು ಸೃಷ್ಟಿಸಿದ್ದ ಲ್ಯಾರಿಯವರ ಸಂಶೋಧನೆ ಆಧುನಿಕ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾಗಿದೆ. ಜೆರಾಕ್ಸ್ ಪಾಲೋ ಆಲ್ಟೋ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುವಾಗ ಕಾಪಿ-ಕಟ್-ಪೇಸ್ಟ್​ ಫಂಕ್ಷನ್​​ಅನ್ನು ಅವರು ಅನ್ವೇಷಣೆ ಮಾಡಿದ್ದರು.

70ರ ದಶಕದಲ್ಲಿ  ಆ್ಯಪಲ್​ ಕಂಪ್ಯೂಟರ್​ ಅಭಿವೃದ್ಧಿ ಮಾಡಲು ಟೆಸ್ಲರ್​ ಸಾಕಷ್ಟು ಕೊಡುಗೆ ನೀಡಿದ್ದು. 1997ರಲ್ಲಿ ಸಂಸ್ಥೆಯನ್ನು ತೊರೆದಿದ್ದರು.ರು. 2011ರಲ್ಲಿ ಅಮೆಜಾನ್​ ಜೊತೆ ಕೈ ಜೋಡಿಸಿದ್ದ ಈ ಸಂಶೋಧಕನ ಶಾವಿಗೆ ಖ್ಯಾತ ತಂತ್ರಜ್ಞಾನ ಆಧಾರಿತ ಸಂಸ್ಥೆಗಳು ಶೋಕ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Strait of Hormuz: 'ಹೌದು.. ನಮ್ಮ ಆಪ್ತ ರಾಷ್ಟ್ರ'... ಭಾರತದ ನೌಕೆಗಳಿಗೆ ಅನುಮತಿ ಕುರಿತು ಇರಾನ್ ರಾಯಭಾರಿ ಹೇಳಿಕೆ!

West Asia conflict: ಇರಾನ್ ಉದ್ವಿಗ್ನತೆ ನಡುವೆಯೂ Hormuz ಜಲಸಂಧಿಯಿಂದ ಸುರಕ್ಷಿತವಾಗಿ ಬಂದ ಭಾರತ ಧ್ವಜ ಹೊತ್ತ ಹಡಗು!

Video: 'ನಿಂಗಿದು ಬೇಕಿತ್ತಾ ಮಗನೇ..': ಬಾಲ್ ಕೊಡಲು ಹೋಗಿ ರನೌಟ್ ಆದ ಪಾಕ್ ಮಾಜಿ ನಾಯಕ, ಕೆರಳಿ ಕೆಂಡವಾದ Salman Agha

West Asia conflict: ಮಸ್ಕತ್‌ನಲ್ಲಿ ಡ್ರೋನ್ ದಾಳಿ, ಭಾರತ ಮೂಲದ ಇಬ್ಬರ ಸಾವು

Khamenei ಸತ್ತ... ಉತ್ತರಾಧಿಕಾರಿ ಕಾಲು ಕಟ್.. ಹೊಸ ಸರ್ವಾಧಿಕಾರಿ ಯಾರು? ಇದು ಇರಾನ್ ಗೇ ಗೊತ್ತಿಲ್ಲ!

SCROLL FOR NEXT