ಮಿಲಿಟರಿ ಶಾಲೆ 
ವಿದೇಶ

ಲಿಬಿಯಾದ ಮಿಲಿಟರಿ ಶಾಲೆಯ ಮೇಲೆ ವೈಮಾನಿಕ ದಾಳಿ, 23 ವಿದ್ಯಾರ್ಥಿಗಳು ಸಾವು

ಲಿಬಿಯಾದ ರಾಜಧಾನಿ ಟ್ರಿಪೋಲಿಯ ಮಿಲಿಟರಿ ಶಾಲೆಯ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 23 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಕೈರೋ: ಲಿಬಿಯಾದ ರಾಜಧಾನಿ ಟ್ರಿಪೋಲಿಯ ಮಿಲಿಟರಿ ಶಾಲೆಯ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 23 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿ ಇತರೆ ಹಲವಾರು ಜನ ಗಾಯಗೊಂಡಿದ್ದಾರೆ ಎಂದು ಯುಎನ್ ಬೆಂಬಲಿತ ರಾಷ್ಟ್ರೀಯ ಒಪ್ಪಂದದ (ಜಿಎನ್‌ಎ) ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ .

ಪ್ರಾಥಮಿಕ ವರದಿಗಳ ಪ್ರಕಾರ, 23 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯವು ತನ್ನ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದೆ.

ಈ ನಡುವೆ ಈ ದಾಳಿಯಲ್ಲಿ 28 ಜನರು ಸಾವನ್ನಪ್ಪಿದ್ದಾರೆ ಎಂದೂ ಅಲ್-ಜಜೀರಾ ಟಿವಿ ವರದಿ ಮಾಡಿದೆ.

ಮಿಲಿಟರಿ ಶಾಲೆ ಟ್ರಿಪೋಲಿಯ ದಕ್ಷಿಣ ಅಲ್-ಹಡ್ಬಾ ಅಲ್-ಖದ್ರಾ ಜಿಲ್ಲೆಯಲ್ಲಿದ್ದು, ಇದನ್ನು ಪಾಶ್ಚಿಮಾತ್ಯ ಮೂಲದ ಜಿಎನ್‌ಎ ನಿಯಂತ್ರಿಸುತ್ತದೆ.

ಏಪ್ರಿಲ್‌ನಿಂದ, ಪ್ರತಿಸ್ಪರ್ಧಿ ಪೂರ್ವ ಮೂಲದ ಅಧಿಕಾರಿಗಳನ್ನು ಬೆಂಬಲಿಸುವ ಲಿಬಿಯಾ ರಾಷ್ಟ್ರೀಯ ಸೇನೆ (ಎಲ್‌ಎನ್‌ಎ) ಟ್ರಿಪೋಲಿಯನ್ನು ವಶಪಡಿಸಿಕೊಳ್ಳುವ ಆಕ್ರಮಣದಲ್ಲಿ ತೊಡಗಿದೆ. ಮಿಲಿಟರಿ ಕಾರ್ಯಾಚರಣೆ ಈ ಪ್ರದೇಶದಲ್ಲಿ ಹಿಂಸಾತ್ಮಕ ಹೋರಾಟದ ತಾಣವಾಗಿ ಪರಿವರ್ತಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್