ವಿದೇಶ

ಖಿನ್ನತೆ, ಮಾನಸಿಕ ಅಸ್ವಸ್ಥತೆಯಿಂದ ವಿಶ್ವ ಆರ್ಥಿಕತೆ ಮೇಲೆ ಟ್ರಿಲಿಯನ್ ಡಾಲರ್ ಪ್ರಭಾವ: ದೀಪಿಕಾ

Shilpa D

ದಾವೂಸ್: ಖಿನ್ನತೆ ಮತ್ತು ಮಾನಸಿಕ ಅಸ್ವಸ್ಥತೆ ಬಗ್ಗೆ ಜನ ಅರ್ಥ ಮಾಡಿಕೊಳ್ಳಬೇಕು , ಬಾಲಿವುಡ್ ನಟಿ ದೀಪಿಕಾ ಪಡುಕೋಣೆ  ಹೇಳಿದ್ದಾರೆ.

‘ನಮಗೆಲ್ಲರಿಗೂ ಗೊತ್ತಿರುವಂತೆ ಈ ವರ್ಷದ ವಿಶ್ವ ಆರ್ಥಿಕ ವೇದಿಕೆಯ ಆಶಯ ‘ಸುಸ್ಥಿರ ಮತ್ತು ಸಂಯೋಜಿತ ಜಗತ್ತಿಗಾಗಿ ಪಾಲ್ಗೊಳ್ಳುವಿಕೆ’. ಈ ಹಿಂದಿನ ವರ್ಷಗಳಿಗಿಂತಲೂ ಹೆಚ್ಚಿನದ್ದನ್ನು ನಾವು ಈ ವರ್ಷ ಸಾಧಿಸಲು, ಜನರ ಆದ್ಯತೆಗಳನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳುವುದು ಅಗತ್ಯ. ಇಂಥ ಪಟ್ಟಿಯಲ್ಲಿ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರ ವಿಚಾರವೂ ಸೇರಿರಬೇಕು’ ಎಂದು ದೀಪಿಕಾ ಹೇಳಿದರು.

ಖಿನ್ನತೆಯಿಂದ ಬಳಲುತ್ತಿರುವವರು ಯಾವುದೇ ಕಾರಣಕ್ಕೂ  ನಾವು ಒಬ್ಬಂಟಿ ಎಂದು ತಿಳಿದುಕೊಳ್ಳಬಾರದು, ಏಕೆಂದರೇ ನಾನು ಕೂಡ ಇಂತಹುದೇ ಪರಿಸ್ಥಿತಿ ಅನುಭವಿಸಿದ್ದೆ, ಎಂದು ಅದನ್ನು ನೆನಪಿಸಿಕೊಂಡಿದ್ದಾರೆ.

‘ಮಾನಸಿಕ ಆರೋಗ್ಯವು ನಮ್ಮೆದುರು ದೊಡ್ಡ ಸವಾಲಾಗಿ ನಿಂತಿದೆ. ಆದರೆ ಮಾನಸಿಕ ಸಮಸ್ಯೆಯೊಂದಿಗೆ ನನ್ನ ಪ್ರೀತಿ ಮತ್ತು ದ್ವೇಷದ ಸಂಬಂಧವು ಸಾಕಷ್ಟು ಕಳಿಸಿದೆ. ಹಾಗೆ ಕಲಿತ ಪಾಠಗಳಲ್ಲಿ ತಾಳ್ಮೆಯಿಂದ ಇರುವುದೂ ಒಂದು. (ಇಂಥ ಸಮಸ್ಯೆ ಎದುರಿಸುತ್ತಿರುವವರು) ನೀವು ಒಬ್ಬರೇ ಅಲ್ಲ, (ನಿಮಗಾಗಿ) ಮುಖ್ಯವಾಗಿ ಸಾಕಷ್ಟು ಭರವಸೆಗಳಿವೆ ಎಂಬುದನ್ನು ಇಂಥವರಿಗೆ ಮನಗಾಣಿಸಬೇಕಿದೆ ಎಂದು ನುಡಿದರು.
ಖಿನ್ನತೆ, ಮಾನಸಿಕ ಅಸ್ವಸ್ಥತೆಯಿಂದ ವಿಶ್ವ ಆರ್ಥಿಕತೆ ಮೇಲೆ ಟ್ರಿಲಿಯನ್ ಡಾಲರ್ ಪ್ರಭಾವ ಬೀರುತ್ತದೆ, ‘ಜಗತ್ತಿನಲ್ಲಿ ಏನೆಲ್ಲಾ ಆಗಿದೆಯೋ ಅದು ಭರವಸೆಯಿಂದ ಆಗಿದೆಎಂದು ಹೇಳಿದ್ದಾರೆ. 

ಖಿನ್ನತೆಯಿಂದ ಬಳಲುತ್ತಿದ್ದ ದೀಪಿಕಾ ಅವರು 2015ರಲ್ಲಿ ಅದರಿಂದ ಹೊರಬಂದಿದ್ದರು. ಅದೇ ಪ್ರೇರಣೆಯಿಂದ ‘ದಿ ಲೈವ್, ಲವ್, ಲಾಫ್ ಫೌಂಡೇಶನ್’ ಅನ್ನು ಸ್ಥಾಪಿಸಿರುವ ಅವರು, ಈ ಮೂಲಕ ಮಾನಸಿಕ ಅಸ್ವಸ್ಥತೆಯನ್ನು ಎದುರಿಸುತ್ತಿರುವವರಿಗೆ ನೆರವಾಗುತ್ತಿದ್ದಾರೆ.  ದೀಪಿಕಾ ಅವರಿಗೆ ವಿಶ್ವ ಆರ್ಥಿಕ ವೇದಿಕೆಯ ವಿಶ್ವ ಕಲಾ ವೇದಿಕೆ ಅಧ್ಯಕ್ಷೆ ಮತ್ತು ಸಹ-ಸಂಸ್ಥಾಪಕಿ ಹಿಲ್ಡೆ ಶ್ವಾಬ್ ಅವರು ಪ್ರದಾನ ಮಾಡಿದರು.

SCROLL FOR NEXT