ವಿದೇಶ

ನೇಪಾಳ: ಪ್ರವಾಸಕ್ಕೆ ತೆರಳಿದ್ದ 8 ಮಂದಿ ಭಾರತೀಯರ ಸಾವು

Srinivasamurthy VN

ಕಠ್ಮಂಡು: ಪ್ರವಾಸಕ್ಕಾಗಿ ನೇಪಾಳಕ್ಕೆ ತೆರಳಿದ್ದ 8 ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ನೇಪಾಳದ ಡಮನ್ ನಲ್ಲಿನ ರೆಸ್ಟೋರೆಂಟ್ ನ ಹೊಟೆಲ್ ಕೊಠಡಿಯಲ್ಲಿ 8 ಮಂದಿ ಪ್ರವಾಸಿಗರ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಸಾವನ್ನಪ್ಪಿದ ಪ್ರವಾಸಿಗರೆಲ್ಲರೂ ಭಾರತದ ಕೇರಳ ರಾಜ್ಯದವರೆಂದು ತಿಳಿದುಬಂದಿದೆ. ಮೃತರೆಲ್ಲರೂ ಒಂದೇ ಕುಟುಂಬದವರಾಗಿದ್ದು, ದಂಪತಿ ಮತ್ತು 4 ಮಕ್ಕಳು ಹಾಗೂ ಇಬ್ಬರು ಸಂಬಂಧಿಕರು ಕೊಠಡಿಯಲ್ಲಿ ತಂಗಿದ್ದರು ಎನ್ನಲಾಗಿದೆ.

ಡಮನ್ ನ ಮಕವಾನ್‌ಪುರ ಜಿಲ್ಲೆಯ ಎವರೆಸ್ಟ್ ಪನೋರಮಾ ರೆಸಾರ್ಟ್ ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗ್ಯಾಸ್ ಹೀಟರ್ ನಿಂದ ಉಸಿರುಗಟ್ಟಿ ಸಾವು
ಇನ್ನು ಮೇಲ್ನೋಟಕ್ಕೆ ಪ್ರವಾಸಿಗರಲ್ಲೆರೂ ಉಸಿರುಗಟ್ಟೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಅಧಿಕಾರಿಗಳು ನೀಡಿರುವ ಮಾಹಿತಿ ಮೇರೆಗೆ ಡಮನ್ ನಲ್ಲಿ ಮೈನಸ್ ಡಿಗ್ರಿ ಚಳಿ ಇದ್ದು, ಚಳಿಯಿಂದ ತಪ್ಪಿಸಿಕೊಳ್ಳಲು ಇವರು ತಂಗಿದ್ದ ಕೊಠಡಿಗೆ ಗ್ಯಾಸ್ ಹೀಟರ್ ನ ಸೇವೆ ಒದಗಿಸಲಾಗಿತ್ತು. ಈ ಹೀಟರ್ ನಿಂದ ಹೊರ ಬಂದ ಗ್ಯಾಸ್ ನಿಂದಲೇ ಪ್ರವಾಸಿಗರಲ್ಲೆರೂ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪ್ರಸ್ತುತ ಮೃತ ದೇಹಗಳನ್ನು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ವರದಿ ಬಂದ ಬಳಿಕ ನಿಖರ ಉತ್ತರ ದೊರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT