ವಿದೇಶ

ಪಾಕಿಸ್ತಾನದಲ್ಲಿ ಗೋಧಿ ಹಿಟ್ಟಿಗಾಗಿ ಹಾಹಾಕಾರ!

Nagaraja AB

ಲಾಹೋರ್:  ಉಗ್ರರನ್ನು  ಪೋಷಿಸುತ್ತಿರುವ  ನೆರೆಯ  ಪಾಕಿಸ್ತಾನದಲ್ಲಿ  ಈಗ  ಹೊಸ ಬಿಕ್ಕಟ್ಟು  ಸೃಷ್ಟಿಯಾಗಿದೆ. ದೇಶದಲ್ಲಿ ಗೋಧಿ ಹಿಟ್ಟಿನ   ತೀವ್ರ  ಕೊರತೆಯಿಂದ ಚಪಾತಿ  ತಿನ್ನುವ  ಜನರು  ಸಮಸ್ಯೆ  ಎದುರಿಸುವಂತಾಗಿದೆ

 ಖೈಬರ್ ಪಖ್ತೂನ್ ಖವಾ  ಪ್ರಾಂತ್ಯದ  ರಾಜಧಾನಿ  ಪೇಷಾವರ್  ನಗರದಲ್ಲಿ ಗೋದಿ ಹಿಟ್ಟು  ಮಾರಾಟ ಮಾಡುವ ೨,೫೦೦ ಮಳಿಗೆಗಳಿದ್ದು, ಗೋಧಿ  ಹಿಟ್ಟಿನ ಕೊರತೆ ಕಾರಣ   ಈ  ಅಂಗಡಿಗಳು  ಬಹುತೇಕ ಬಂದ್  ಆಗಿವೆ. 

ಬಲೂಚಿಸ್ತಾನ್, ಸಿಂಧ್, ಪಂಜಾಬ್ ಮತ್ತು ಖೈಬರ್ ಪಖ್ತೂನ್  ಖವಾ ಪ್ರಾಂತ್ಯಗಳಲ್ಲಿ ಗೋಧಿ ಹಿಟ್ಟಿನ ಕೊರತೆ  ತೀವ್ರವಾಗಿ ಕಾಣಿಸಿಕೊಂಡಿದೆ. ಗೋಧಿ ಹಿಟ್ಟಿನ ಅಭಾವದ ಕಾರಣ  ಚಪಾತಿ  ಪ್ರಿಯರು  ತಮ್ಮ ಆಹಾರ  ಅಗತ್ಯಗಳಿಗೆ  ಅಕ್ಕಿಯ ಮೊರೆ ಹೋಗಿದ್ದಾರೆ. 

ಗೋಧಿ ಹಿಟ್ಟು  ಕೊರತೆ ಕಾರಣ  ದೇಶದ ಮಾರುಕಟ್ಟೆಯಲ್ಲಿ ಗೋಧಿ  ಬೆಲೆ ತೀವ್ರ ಏರಿಕೆ  ಕಂಡಿದೆ. ದೇಶದಲ್ಲಿ ಗೋಧಿ ಹಿಟ್ಟಿನ ಬೆಲೆ ನಿಯಂತ್ರಣಕ್ಕೆ  ಸೂಕ್ತ ಕ್ರಮ ಕೈಗೊಳ್ಳುವಂತೆ,  ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರಿಗಳಿಗೆ  ತಾಕೀತು ಮಾಡಿದ್ದರೂ,  ತಳಮಟ್ಟದಲ್ಲಿ  ಯಾವುದೇ  ಬದಲಾವಣೆ  ಸಾಧ್ಯವಾಗಿಲ್ಲ

SCROLL FOR NEXT