ವಿದೇಶ

ಅಮೆರಿಕದಲ್ಲಿ ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ 2,11,000ಕ್ಕೆ ಏರಿಕೆ

Lingaraj Badiger

ವಾಷಿಂಗ್ಟನ್: ಅಮೆರಿಕದಲ್ಲಿ ಉದ್ಯೋಗವಿಲ್ಲದೆ ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಕಳೆದ ವಾರ ಗಣನೀಯ ಏರಿಕೆಯಾಗಿದೆ ಎಂದು ಅಮೆರಿಕ ಕಾರ್ಮಿಕ ಅಂಕಿ-ಅಂಶ ಬ್ಯೂರೋ ಗುರುವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

ಜನವರಿ18ಕ್ಕೆ ಕೊನೆಗೊಂಡ ವಾರದಲ್ಲಿ ಅಮೆರಿಕದಲ್ಲಿ ನಿರುದ್ಯೋಗ ಸವಲತ್ತುಗಳಿಗಾಗಿ ಅರ್ಜಿ ಸಲ್ಲಿಸಿರುವವರ ಸಂಖ್ಯೆ ಹಿಂದಿನ ವಾರಕ್ಕೆ ಹೋಲಿಸಿದರೆ 6,000 ದಷ್ಟು ಏರಿಕೆಯಾಗಿದ್ದು, 211,000ಕ್ಕೆ ತಲುಪಿದೆ ಎಂದು ಬ್ಯೂರೋ ತಿಳಿಸಿದೆ. 

ಈ ಮಧ್ಯೆ, ಹಿಂದಿನ ವಾರದ ಪ್ರಮಾಣವನ್ನು 1,000ರಷ್ಟು ಹೆಚ್ಚಿಸಿ 204,000 ರಿಂದ 205,000 ಕ್ಕೆ ಪರಿಷ್ಕರಿಸಲಾಗಿದೆ ಎಂದು ಬ್ಯೂರೋ ತಿಳಿಸಿದೆ.

ಕಳೆದ ಡಿಸೆಂಬರ್ ನಲ್ಲಿ ಸಂಸ್ಥೆಗಳು 1,45,000 ಜನರಿಗೆ ಉದ್ಯೋಗ ನೀಡಿದ್ದಾರೆ.  ನಿರುದ್ಯೋಗ ಪ್ರಮಾಣ ಶೇ 3.5 ರಷ್ಟು ಮುಂದುವರೆದಿದೆ ಎಂದು ಬ್ಯೂರೋ ವರದಿ ಮಾಡಿದೆ.

SCROLL FOR NEXT