ವಿದೇಶ

ಕೊರೋನಾ ಚಿಕಿತ್ಸೆಗೆ ಬಳಸಲಾಗುತ್ತಿದ್ದ HCQ, lopinavir/ritonavir ಔಷಧಿ ಮೇಲಿನ ಪ್ರಯೋಗ ಕೈ ಬಿಟ್ಟ ವಿಶ್ವ ಆರೋಗ್ಯ ಸಂಸ್ಥೆ

Srinivasamurthy VN

ಜಿನೀವಾ: ಮಾರಕ ಕೊರೋನಾ ವೈರಸ್ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತಿದ್ದ HCQ, lopinavir/ritonavir ಔಷಧಿ ಮೇಲಿನ ಪ್ರಯೋಗವನ್ನು ವಿಶ್ವ ಆರೋಗ್ಯ ಸಂಸ್ಥೆ ಕೈ ಬಿಟ್ಟಿದೆ.

ಹೌದು.. ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಹಿಂದೆ ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೋನಾ ವೈರಸ್ ಗೆ ಔಷಧಿಯಾಗಬಲ್ಲದು ಎಂದು ಹೇಳಿದ್ದರು. ಆದರೆ ಆ ಬಳಿಕ ಕೊರೋನಾ ವೈರಸ್ ಸಾವುಗಳ ಪ್ರಮಾಣ ಕಡಿಮೆ ಮಾಡುವಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ನಿಷ್ಪ್ರಯೋಜಕ ಎಂದು ವಿಜ್ಞಾನಿಗಳು  ಹೇಳಿದ್ದರು. ಹೀಗಾಗಿ ಅಮೆರಿಕ ವಿಜ್ಞಾನಿಗಳು ಇದರ ಮೇಲಿನ ಪ್ರಯೋಗವನ್ನು ಕೈ ಬಿಟ್ಟಿದ್ದರು. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಕೂಡ HCQ ಮೇಲಿನ ಪ್ರಯೋಗವನ್ನು ಕೈ ಬಿಟ್ಟಿದೆ. HCQ ಮಾತ್ರವಲ್ಲದೇ lopinavir/ritonavir ಔಷಧಿ ಮೇಲಿನ ಪ್ರಯೋಗವನ್ನೂ ವಿಶ್ವ ಆರೋಗ್ಯ ಸಂಸ್ಥೆ ಕೈ ಬಿಟ್ಟಿದೆ.

HCQ ನಂತೆಯೇ lopinavir/ritonavir ಔಷಧಿ ಕೂಡ ಕೊರೋನಾ ಸೋಂಕಿತರ ಮೇಲೆ ಯಾವುದೇ ರೀತಿಯ ಸಕಾರಾತ್ಮಕ ಪರಿಣಾಮ ಬೀರುತ್ತಿಲ್ಲ. ಹೀಗಾಗಿ lopinavir/ritonavir ಔಷಧಿ ಮೇಲಿನ ಪ್ರಯೋಗವನ್ನೂ ಕೈ ಬಿಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದೇ ಕಾರಣಕ್ಕಾಗಿ  ವಿಶ್ವ ಸಂಸ್ಥೆಯ ಅಂತರರಾಷ್ಟ್ರೀಯ ಸ್ಟೀರಿಂಗ್ ಸಮಿತಿ ಈ ಎರಡೂ ಔಷಧಿಗಳ ಮೇಲಿನ ಪ್ರಯೋಗವನ್ನು ಕೈಬಿಟ್ಟಿದೆ. 

ಅಂತೆಯೇ ಈ ಔಷಧಿಗಳ ಪ್ರಯೋಗವನ್ನು ಆಸ್ಪತ್ರೆಗೆ ದಾಖಲಾದ ಗಂಭೀರ ಸ್ಥಿತಿಯಲ್ಲಿರುವ ಕೋವಿಡ್-19 ರೋಗಿಗಳ ಮೇಲೆ ಮಾಡದಂತೆ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶನ ನೀಡಿದೆ. ಆದರೆ ಆಸ್ಪತ್ರೆಯಿಂದ ಹೊರಗೆ ಇರುವ ಕೋವಿಡ್ ರೋಗಿಗಳ ಮೇಲಿನ ಬಳಕೆಗೆ ಯಾವುದೇ ರೀತಿಯ ಮಿತಿ ಹೇರಿಕೆ ಮಾಡಿಲ್ಲ  ಎಂದೂ ಸ್ಪಷ್ಟಪಡಿಸಿದೆ.

SCROLL FOR NEXT