ವಿದೇಶ

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊಗೆ ಕೊರೋನಾ ಪಾಸಿಟಿವ್

Nagaraja AB

ಬ್ರೆಸಿಲಿಯಾ: ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ. ಬ್ರೆಜಿಲ್ ವಿ ಸಂದರ್ಶನವೊಂದರಲ್ಲಿ ಅವರೇ ಈ ವಿಷಯವನ್ನು ತಿಳಿಸಿದ್ದಾರೆ.

ಭಾನುವಾರವೇ ಜ್ವರದ ಲಕ್ಷಣ ಕಾಣಿಸಿಕೊಂಡಿತ್ತು. ನಂತರ ಇದೀಗ ಕಾಯಿಲೆ ವಾಸಿಯಾಗಲು  ಮಲೇರಿಯಾ ವಿರೋಧಿ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಬೋಲ್ಸನಾರೋ ಸಂದರ್ಶನದಲ್ಲಿ ಹೇಳಿದ್ದಾರೆ.

ಜ್ವರ ಹಾಗೂ ಮೈ ನೋವು ಕಾಣಿಸಿಕೊಂಡ ನಂತರ 65 ವರ್ಷದ ರಾಜಕಾರಣಿ ತನ್ನ ಬೆಂಬಲಿಗರಿಗೆ ಕೋವಿಡ್ ಟೆಸ್ಟ್ ಮಾಡಿಸಲು ಹೇಳಿದ್ದಾರೆ. ಅವರ ಶ್ವಾಸಕೋಶ ಉತ್ತಮವಾಗಿರುವುದಾಗಿ ಎಕ್ಸ್- ರೇ ಟೆಸ್ಟ್ ನಿಂದ ಬಂದಿರುವುದಾಗಿ ಗ್ಲೋಬೊ ವರದಿ ಮಾಡಿದೆ.

ಈ ಹಿಂದೆ ಎರಡು ಬಾರಿ ಪರೀಕ್ಷೆ ಮಾಡಿಸಿದ್ದಾಗ ನೆಗೆಟಿವ್ ಬಂದಿತ್ತು. ಆದರೆ, ಇದೀಗ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.ಬೋಲ್ಸನಾರೊ ಬೇಗ ಗುಣಮುಖವಾಗಲಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಭ ಹಾರೈಸಿದೆ.

SCROLL FOR NEXT