ವಿದೇಶ

ಕೋವಿಡ್-19 ಸಾಂಕ್ರಾಮಿಕವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಕ್ತವಾಗಿ ನಿಭಾಯಿಸುತ್ತಿಲ್ಲ: ಬಹುತೇಕ ಅಮೆರಿಕನ್ನರ ಅಭಿಮತ

Sumana Upadhyaya

ವಾಷಿಂಗ್ಟನ್: ವಿಶ್ವದಲ್ಲಿ ಕೊರೋನಾ ಸೋಂಕಿತರು ಮತ್ತು ಸಾವಿನ ಸಂಖ್ಯೆಯಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ, ಅಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

ಈ ಮಧ್ಯೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಕೊರೋನಾ ಸೋಂಕನ್ನು ನಿರ್ವಹಿಸುತ್ತಿರುವ ರೀತಿಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್-ಎಬಿಸಿ ಸಮೀಕ್ಷೆ ವರದಿ ಮಾಡಿದೆ.

ಮೊನ್ನೆ ಜುಲೈ 12ರಿಂದ 15ರ ಮಧ್ಯೆ ಈ ಸಮೀಕ್ಷೆ ನಡೆಸಲಾಗಿದ್ದು ಅದರಲ್ಲಿ ಶೇಕಡಾ 38ರಷ್ಟು ಮಂದಿ ಅಮೆರಿಕನ್ನರು ಅಧ್ಯಕ್ಷರು ಕೊರೋನಾ ಸೋಂಕನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ಶೇಕಡಾ 51ರಷ್ಟಿದ್ದ ಕೊರೋನಾ ಸೋಂಕಿತರ ಸಂಖ್ಯೆ ಇದೀಗ ಶೇಕಡಾ 46ಕ್ಕೆ ಇಳಿದಿರುವುದೇ ಅದಕ್ಕೆ ನಿದರ್ಶನ ಎನ್ನುತ್ತಿದ್ದಾರೆ.

ಆದರೆ ಶೇಕಡಾ 60ರಷ್ಟು ಮಂದಿ ಇದನ್ನು ಒಪ್ಪುತ್ತಿಲ್ಲ, ದೇಶದಲ್ಲಿ ಮಾರ್ಚ್ ತಿಂಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶೇಕಡಾ 45ರಷ್ಟಿದ್ದರೆ ಅದು ಮೇ ತಿಂಗಳಲ್ಲಿ ಶೇಕಡಾ 53ರಷ್ಟಾಗಿದೆ ಎನ್ನುತ್ತಿದ್ದಾರೆ.

ದೇಶದ 1,006 ವಯಸ್ಕರ ಮೇಲೆ ನಡೆಸಿದ ಸೆಲ್ ಫೋನ್ ಮತ್ತು ಸ್ಥಿರ ದೂರವಾಣಿ ಸಂದರ್ಶನದಿಂದ ಈ ಮಾಹಿತಿ ಹೊರಬಿದ್ದಿದೆ.ಕೊರೋನಾ ಸೋಂಕನ್ನು ನಿಭಾಯಿಸುವಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಶೇಕಡಾ 52ರಷ್ಟು ಮಂದಿ ಹೇಳುತ್ತಿದ್ದಾರೆ.

ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ವರದಿ ಪ್ರಕಾರ ಅಮೆರಿಕದಲ್ಲಿ ಇದುವರೆಗೆ ಕೋವಿಡ್-19ಗೆ 36 ಲಕ್ಷದ 41 ಸಾವಿರದ 539 ಮಂದಿಗೆ ಸೋಂಕು ತಗಲಿದ್ದು ಸೋಂಕಿನಿಂದ 1 ಲಕ್ಷದ 39 ಸಾವಿರದ 176 ಮಂದಿ ಮೃತಪಟ್ಟಿದ್ದಾರೆ.

SCROLL FOR NEXT