ಕಲಾ ನಾರಾಯಣಸಾಮಿ 
ವಿದೇಶ

ಕೋವಿಡ್ ಸಂಕಷ್ಟ ಕಾಲದಲ್ಲಿ ಉತ್ತಮ ಸೇವೆ: ಭಾರತೀಯ ಮೂಲದ ದಾದಿಗೆ ಸಿಂಗಾಪುರ ಪ್ರೆಸಿಡೆಂಟ್ ಅವಾರ್ಡ್

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅತ್ಯಂತ ಮುತುವರ್ಜಿಯಿಂದ ಸೇವೆ ಸಲ್ಲಿಸಿದ್ದಕ್ಕಾಗಿ  ಸಿಂಗಾಪುರದ 59 ವರ್ಷದ ಭಾರತೀಯ ಮೂಲದ ದಾದಿಯೊಬ್ಬರಿಗೆ ದಾದಿಯರಿಗೆ ನೀಡಲಾಗುವ ಅತ್ಯುನ್ನತ ಪುರಸ್ಕಾರದಲ್ಲಿ ಒಂದಾದ ಪ್ರೆಸಿಡೆಂಟ್ ಅವಾರ್ಡ್ ಫಾರ್ ನರ್ಸ್ ನೀಡಿ ಸನ್ಮಾನಿಸಲಾಗಿದೆ.

ಸಿಂಗಾಪುರ: ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅತ್ಯಂತ ಮುತುವರ್ಜಿಯಿಂದ ಸೇವೆ ಸಲ್ಲಿಸಿದ್ದಕ್ಕಾಗಿ  ಸಿಂಗಾಪುರದ 59 ವರ್ಷದ ಭಾರತೀಯ ಮೂಲದ ದಾದಿಯೊಬ್ಬರಿಗೆ ದಾದಿಯರಿಗೆ ನೀಡಲಾಗುವ ಅತ್ಯುನ್ನತ ಪುರಸ್ಕಾರದಲ್ಲಿ ಒಂದಾದ ಪ್ರೆಸಿಡೆಂಟ್ ಅವಾರ್ಡ್ ಫಾರ್ ನರ್ಸ್ ನೀಡಿ ಸನ್ಮಾನಿಸಲಾಗಿದೆ.

ಭಾರತ ಮೂಲದವರಾದ  ಕಲಾ ನಾರಾಯಣಸಾಮಿ ಈ ಪ್ರತಿಷ್ಠಿತ ಗೌರವ ಸ್ವೀಕರಿಸಿದವರೆಂದು ತಿಳಿದುಬಂದಿದೆ. ಪ್ರಶಸ್ತಿಯು ಟ್ರೋಫಿ, ಅಧ್ಯಕ್ಷ ಹಲೀಮಾ ಯಾಕೋಬ್ ಸಹಿ ಮಾಡಿದ ಪ್ರಮಾಣಪತ್ರ ಮತ್ತು 10,000  ಸಿಂಗಾಪುರ ಡಾಲರ್ ( 7,228 ಅಮೆರಿಕನ್ ಡಾಲರ್) ನಗದನ್ನು ಒಳಗೊಂಡಿದೆ.

ವುಡ್ ಲ್ಯಾಂಡ್ಸ್ ಹೆಲ್ತ್ ಕ್ಯಾಂಪ್ ನ;ಲ್ಲಿ ನರ್ಸಿಂಗ್ ವಿಭಾಗದ ಉಪನಿರ್ದೇಶಕರಾಗಿರುವ ನಾರಾಯಣಸ್ವಾಮಿ  ಅವರಿಗೆ ಸೋಂಕಿನ ನಿಯಂತ್ರಣ ಅಭ್ಯಾಸದ ವೇಳೆ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ  ಪ್ರಶಸ್ತಿ ನೀಡಲಾಯಿತು, ಕೋವಿಡ್ 19 ರೋಗಿಗಳ ಆರೈಕೆಗಾಗಿ ಯಿಶುನ್ ಸಮುದಾಯ ಆಸ್ಪತ್ರೆಯಲ್ಲಿ ವಾರ್ಡ್‌ಗಳನ್ನು ಪರಿವರ್ತಿಸಲು ಕೆಲಸದ ಹರಿವು ಮತ್ತು ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಪರಿಚಯಿಸುವ ಮೂಲಕ ನಾರಾಯಣಸ್ವಾಮಿ ಉತ್ತಮ ಸಾಧನೆ ಮಾಡಿದ್ದಾರೆ.

"ನಾವು ಸಾರ್ಸ್ ನಿಂದ ಕಲಿತದ್ದೆಲ್ಲವನ್ನೂ ಇಲ್ಲಿ ಪ್ರಯೋಗಕ್ಕೆ ಒಳಪಡಿಸಿದ್ದೇವೆ,. " ನಾರಾಯಣಸ್ವಾಮಿಯವರ ಹೆಸರು ಉಲ್ಲೇಖಿಸಿ ಚಾನೆಲ್ ನ್ಯೂಸ್ ಏಷ್ಯಾ  ವರದಿ ಹೇಳಿದೆ. ಸಿಂಗಾಪುರದಲ್ಲಿ ಶುಶ್ರೂಷೆಯ ಆಧುನೀಕರಣದೊಂದಿಗೆ ಅವರು ತೊಡಗಿಸಿಕೊಂಡಿದ್ದಾರೆ, ವಸ್ತುಗಳ ಬಳಕೆಯನ್ನು ಪತ್ತೆಹಚ್ಚಲು ಸ್ವಯಂಚೆಕ್ ಔಟ್ ದಾಸ್ತಾನು ನಿರ್ವಹಣಾ ವಿತರಣಾ ಮಾದರಿಯ ಜಾರಿ ಸೇರಿದಂತೆ  ನಿಖರವಾದ  ಮಾಪನಗಳು ಮತ್ತು ಇಮೇಜ್ ಸೆರೆಹಿಡಿಯುವಿಕೆಯನ್ನು ಒದಗಿಸುವ ಸುವ್ಯವಸ್ಥಿತ ಮೌಲ್ಯಮಾಪನ ಪ್ರಕ್ರಿಯೆಯ ಪರಿಚಯಿಸುವಲ್ಲಿಯೂ ಇವರ ಪಾತ್ರ ಮಹತ್ವದ್ದಾಗಿತ್ತು.

ರೋಗಿಗಳ ಆರೈಕೆ, ಕಾಳಜಿ, ಶಿಕ್ಷಣ, ಸಂಶೋಧನೆ ಮತ್ತು ಆಡಳಿತಕ್ಕೆ ನಿರಂತರ ಕೊಡುಗೆ ನೀಡಿ ಸಾಧನೆ ಮೆರೆದ ದಾದಿಯರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. 2000 ರಲ್ಲಿ ಈ ಪ್ರಶಸ್ತಿ ಸ್ಥಾಪನೆಯಾದಂದಿನಿಂದ ಇಂದಿನವರೆಗೆ ಒಟ್ಟೂ ಎಪ್ಪತ್ತೇಳು ದಾದಿಯರು ಈ ಗೌರವಕ್ಕೆ ಪಾತ್ರವಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT