ವಿದೇಶ

ಆನ್ ಲೈನ್ ತರಗತಿಗಳಿಗೆ ಹೊಸ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ: ಅಮೆರಿಕ

Srinivas Rao BV

ವಾಷಿಂಗ್ ಟನ್: ಆನ್ ಲೈನ್ ತರಗತಿಗಳಿಗೆ ಹೊಸ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ ಎಂದು ಅಮೆರಿಕ ಘೋಷಿಸಿದೆ. 

ಕೇವಲ ಆನ್ ಲೈನ್ ತರಗತಿಗಳಿಗಷ್ಟೇ ಪ್ರವೇಶ ಪಡೆಯುವ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನಿರಾಕರಿಸಲಾಗುವುದು ಎಂದು ಇಮಿಗ್ರೇಷನ್ ಹಾಗೂ ಕಸ್ಟಮ್ಸ್ ಜಾರಿ ಇಲಾಖೆ ಹೇಳಿದೆ. 

ಕೇವಲ ಆನ್ ಲೈನ್ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ವೀಸಾವನ್ನು ರದ್ದುಗೊಳಿಸಲು ಟ್ರಂಪ್ ಆಡಳಿತ ಆದೇಶಿಸಿತ್ತು. ಈ ಆದೇಶದ ವಿರುದ್ಧ ಹಲವಾರು ವಿವಿಗಳು ಹಾಗೂ ಗೂಗಲ್ ಸೇರಿದಂತೆ ಅನೇಕ ಸಂಸ್ಥೆಗಳು ಕೋರ್ಟ್ ಮೆಟ್ಟಿಲೇರಿ ಕೋರ್ಟ್ ಆದೇಶದ ನಂತರ ಸರ್ಕಾರ ತನ್ನ ಆದೇಶವನ್ನು  ಹಿಂಪಡೆದಿತ್ತು.  ಕೋವಿಡ್-19 ರ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ವಿದೇಶಿಗಳಿಗೆ ನೀಡಲಾಗುವ ಹಲವು ವೀಸಾ ನಿಯಮಗಳನ್ನು ಬದಲಾವಣೆ ಮಾಡಿದ್ದರು.

ನೇರವಾಗಿ ತರಗತಿಗಳಿಗೆ ಹೋಗುವಂತೆ ಶಾಲೆಗಳನ್ನು ಪುನಾರಂಭ ಮಾಡುವುದಕ್ಕೆ ಆದೇಶ ನೀಡಲು ಟ್ರಂಪ್ ಸರ್ಕಾರ ಉತ್ಸುಕವಾಗಿದೆ.ಶಾಲೆಗಳನ್ನು ಪುನಾರಂಭಗೊಳಿಸುವ ಸಂಬಂಧದ ಅಂತಿಮ ನಿರ್ಧಾರವನ್ನು ರಾಜ್ಯಗಳ ಪರಿವ್ಯಾಪ್ತಿಗೆ ನೀಡಲಾಗಿದ್ದು ಶಾಲೆಗಳನ್ನು ಸುರಕ್ಷಿತವಾಗಿ ಹೇಗೆ ಪುನಾರಂಭಗೊಳಿಸುವ ಸಂಬಂಧ ನಿರ್ಧಾರ ಕೈಗೊಳ್ಳಬೇಕಿದೆ. 

SCROLL FOR NEXT