ವಿದೇಶ

ಸಾಕು ಪ್ರಾಣಿಗಳಲ್ಲೂ ಕಾಣಿಸಿಕೊಳ್ಳುತ್ತಿದೆ ಕೋವಿಡ್-19 ಉಂಟುಮಾಡುವ ಸಾರ್ಸ್ ಸಿಒವಿ-2 ವೈರಾಣು!

Srinivas Rao BV

ಲಂಡನ್: ಕೋವಿಡ್-19 ಉಂಟುಮಾಡುವ ಸಾರ್ಸ್-ಸಿಒವಿ-2 ವೈರಾಣು ಸಾಕು ಪ್ರಾಣಿಗಳಲ್ಲಿಯೂ ಕಂಡುಬಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಇಟಾಲಿಯಲ್ಲಿ ಮನೆಗಳಲ್ಲಿ ಸಾಕಿರುವ ಬೆಕ್ಕು ಹಾಗೂ ನಾಯಿಗಳಲ್ಲಿ ಸಣ್ಣ ಪ್ರಮಾಣದಲ್ಲಿ ಇದು ಕಂಡುಬಂದಿದ್ದು ಕೋವಿಡ್-19 ಸಾಕು ಪ್ರಾಣಿಗಳಲ್ಲಿಯೂ ಕಂಡುಬರಬಹುದು ಎಂದು ಹೇಳಿದ್ದಾರೆ.

ಬ್ರಿಟನ್ ನಲ್ಲಿರುವ ಯುನಿವರ್ಸಿಟಿ ಆಫ್ ಲಿವರ್ ಪೂಲ್ ಸೇರಿದಂತೆ ಹಲವೆಡೆ ಸಂಶೋಧಕರು 500 ಕ್ಕೂ ಹೆಚ್ಚು ಸಾಕು ಪ್ರಾಣಿಗಳಿಂದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಆದರೆ ಯಾವುದೇ ಪ್ರಾಣಿಗೂ ಪರೀಕ್ಷೆಯಲ್ಲಿ ಪಿಸಿಆರ್ ಪಾಸಿಟೀವ್ ಬಂದಿಲ್ಲ. ಆದರೆ ಶೇ.3.4 ರಷ್ಟು ನಾಯಿಗಳು ಶೇ.3.9 ರಷ್ಟು ಬೆಕ್ಕುಗಳಿಗೆ ಕೋವಿಡ್-19 ಉಂಟುಮಾಡುವ ಸಾರ್ಸ್ ಸಿಒವಿ-2 ನ್ಯೂಟ್ರಿಲೈಜ್ ಮಾಡುವ ಪ್ರತಿಕಾಯಗಳು ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಯಾರ ಮನೆಯವರಿಗೆ ಕೋವಿಡ್-19 ಸೋಂಕಿರುವುದೋ ಅಂತಹವರ ಮನೆಗಳಲ್ಲಿ ಪ್ರಾಣಿಗಳಿಗೂ ಆ ವೈರಸ್ ಹರಡುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿ ಹೇಳುತ್ತಿದೆ. ಈ ಕುರಿತಂತೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಾದ ಅಗತ್ಯವಿದ್ದು ಎನ್ನುತ್ತಾರೆ ಲಿವರ್ ಪೂಲ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್ ನ ಸಂಶೋಧಕರು.

ಮನುಷ್ಯರು ಹಾಗೂ ಸಾಕು ಪ್ರಾಣಿಗಳ ನಡುವೆ ಅಂತರ ಕಾಯ್ದುಕೊಳ್ಳದೇ ಇದ್ದಲ್ಲಿ ಸಾಕು ಪ್ರಾಣಿಗಳಲ್ಲೂ ರೋಗ ಹರಡುವ ಸಾಧ್ಯತೆ ಇರಲಿದೆ. ಈಗಿನ ಪರಿಸ್ಥಿತಿಯಲ್ಲಿ ವೈದ್ಯಕೀಯ ತಂಡ ಸಂಪೂರ್ಣವಾಗಿ ಮನುಷ್ಯರ ಆರೋಗ್ಯದ ಮೇಲೆ ಗಮನ ಹರಿಸಬೇಕಾಗಿ ಈ ಹಂತದಲ್ಲಿ ಈ ಸಾಂಕ್ರಾಮಿಕ ಪ್ರಾಣಿಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಅರಿತುಕೊಳ್ಳುವುದು ಸವಾಲಿನ ಸಂಗತಿಯಾಗಿದೆ ಎಂದು ಇಟಾಲಿಯ ಯೂನಿವರ್ಸಿಟಿ ಆಫ್ ಬಾರಿಯ ಪ್ರೊಫೆಸರ್ ನಿಕೋಲಾ ಡೆಕಾರೊ ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT