ಚೀನಾದ ಅದ್ಯಕ್ಷ ಕ್ಸಿ- ಜಿನ್ ಪಿಂಗ್ ಭಾವಚಿತ್ರ ಸುಡುತ್ತಿರುವ ಜನರ ಚಿತ್ರ 
ವಿದೇಶ

ಭಾರತದ ಪ್ರತಿರೋಧ ನಿಗ್ರಹಿಸುವುದು ಮತ್ತು ಅಮೆರಿಕಾ ಜೊತೆಗಿನ ಸಂಬಂಧಕ್ಕೆ ಅಡ್ಡಿ ಮಾಡುವುದು ಚೀನಾದ ಈಗಿನ ಗುರಿ: ವರದಿ

ಲಡಾಖ್ ನಲ್ಲಿ ಭಾರತೀಯ ಭೂ ಪ್ರದೇಶಗಳ ಮೇಲೆ ಚೀನಾ ಆಕ್ರಮಣದ ಮಧ್ಯೆ ಅಮೆರಿಕಾದೊಂದಿಗೆ ಬೆಳೆಯುತ್ತಿರುವ ಸಂಬಂಧಕ್ಕೆ ಅಡ್ಡಿಪಡಿಸುವುದು ಮತ್ತು ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರತಿರೋಧ ನಿಗ್ರಹಿಸುವುದು ಚೀನಾದ ಈಗಿನ ಗುರಿಯಾಗಿದೆ ಎಂದು ಅಮೆರಿಕಾದ ಪ್ರಭಾವಿ ಥಿಂಕ್ ಥ್ಯಾಂಕ್ ಅಭಿಪ್ರಾಯಪಟ್ಟಿದೆ.

ವಾಷಿಂಗ್ಟನ್: ಲಡಾಖ್ ನಲ್ಲಿ ಭಾರತೀಯ ಭೂ ಪ್ರದೇಶಗಳ ಮೇಲೆ ಚೀನಾ ಆಕ್ರಮಣದ ಮಧ್ಯೆ ಅಮೆರಿಕಾದೊಂದಿಗೆ ಬೆಳೆಯುತ್ತಿರುವ ಸಂಬಂಧಕ್ಕೆ ಅಡ್ಡಿಪಡಿಸುವುದು ಮತ್ತು ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರತಿರೋಧ ನಿಗ್ರಹಿಸುವುದು ಚೀನಾದ ಈಗಿನ ಗುರಿಯಾಗಿದೆ ಎಂದು ಅಮೆರಿಕಾದ ಪ್ರಭಾವಿ ಥಿಂಕ್ ಥ್ಯಾಂಕ್ ಅಭಿಪ್ರಾಯಪಟ್ಟಿದೆ. 

ಚೀನಾ ಪಾಕಿಸ್ತಾನ ಹಾಗೂ ಶ್ರೀಲಂಕಾದೊಂದಿಗೆ ಆಳವಾದ ಸಂಬಂಧ ಹೊಂದುವ ಮೂಲಕ ಈ ಪ್ರದೇಶದಲ್ಲಿ ಪ್ರಾಬಲ್ಯ ಮೆರೆಯಲು ಪ್ರಯತ್ನಿಸುತ್ತಿದೆ ಎಂದು  ಹಡ್ಸನ್ ಇನ್ಸಿಟಿಟ್ಯೂಟ್ ನಡೆಸಿದ ಕೊರೋನಾ ಯುಗದಲ್ಲಿ ಅಮೆರಿಕಾ- ಚೀನಾ ಸ್ಪರ್ಧೆ ಕುರಿತ ಜಾಗತಿಕ ಸರ್ವೆಯಲ್ಲಿ ವರದಿಯಾಗಿದೆ.  

ಕೊಲ್ಲಿ ಮತ್ತು ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಪ್ರಾಮುಖ್ಯತೆಯನ್ನು ಪ್ರಶ್ನಿಸುವ ಚೀನಾದ ದೊಡ್ಡ ಕಾರ್ಯತಂತ್ರದ ಉದ್ದೇಶಕ್ಕೆ ದಕ್ಷಿಣ ಏಷ್ಯಾ ಪ್ರಮುಖವಾಗಿದೆ ಎಂದು ಈ ವಾರ ಬಿಡುಗಡೆಯಾದ ವರದಿ ತಿಳಿಸಿದೆ. ಪ್ರಪಂಚದಾದ್ಯಂತ  ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ರಾಜಕೀಯ, ಕಾರ್ಯತಂತ್ರ ಮತ್ತು ಆರ್ಥಿಕ ಲಾಭಕ್ಕಾಗಿ ಬಳಸಿಕೊಳ್ಳುವ ಚೀನಾದ  ಪ್ರಯತ್ನಗಳನ್ನು ಅಧ್ಯಯನವು ಗಂಭೀರವಾಗಿ ಪರಿಗಣಿಸಿದೆ.

ದಕ್ಷಿಣ ಏಷ್ಯಾದಲ್ಲಿ ಚೀನಾಕ್ಕೆ ನಿಜವಾದ ಪ್ರತಿಸ್ಪರ್ಧಿ ಭಾರತವೇ ಆಗಿದೆ.ದಕ್ಷಿಣ ಏಷ್ಯಾದಲ್ಲಿ, ಆಗ್ನೇಯ, ಪೂರ್ವ ಅಥವಾ ಮಧ್ಯ ಏಷ್ಯಾಕ್ಕಿಂತ ಭಿನ್ನವಾದಂತಹ ನೈಸರ್ಗಿಕ ಪ್ರಾಬಲ್ಯವಿದೆ: ಭಾರತ. ಚೀನಾ ಅದನ್ನು ಸುಲಭವಾಗಿ ಪಕ್ಕಕ್ಕೆ ಸರಿಸಲು ಸಾಧ್ಯವಿಲ್ಲ ಎಂಬುದಾಗಿ ವರದಿ ಹೇಳಿದೆ. 

ಚೀನಾವನ್ನು ಭಾರತ ಸಮಾನ ರಾಷ್ಟ್ರದ ರೀತಿಯಲ್ಲಿ ನೋಡುತ್ತಿದೆ.ಅಲ್ಲದೇ ಅದರ ಗುರಿಗಳ ಬಗ್ಗೆ ಜಾಗರೂಕವಾಗಿದೆ. ಪ್ರಸ್ತುತದಲ್ಲಿನ ಪ್ರಾದೇಶಿಕ ಗಡಿ ವಿವಾದ ಚೀನಾ ಮಂಗಳ ಗ್ರಹದಲ್ಲಿನ ಸಂಬಂಧ ಮೊದಲಾದವೆಲ್ಲವೂ ಸಹಭಾಗಿತ್ವಕ್ಕಿಂತಲೂ ಪ್ರತಿಸ್ಪರ್ಧೆಯನ್ನೆ ಉಂಟುಮಾಡಿವೆ.ಆದಾಗ್ಯೂ, ಭಾರತಕ್ಕೆ ಅಮೆರಿಕಾ,ಜಪಾನ್ ಮತ್ತಿತರ ರಾಷ್ಟ್ರಗಳು ಬೆಂಬಲಿಸಬೇಕಾದ ಅಗತ್ಯವಿದೆ ಎಂದು ವರದಿ ಒತ್ತಾಯಿಸಿದೆ.

ಒಂದು ವೇಳೆ ಭಾರತ ಪ್ರಾದೇಶಿಕ ಪೂರೈಕೆದಾರ ಪಾತ್ರವನ್ನು ವಹಿಸಬೇಕೆಂದು ಅಮೆರಿಕಾ ಬಯಸಿದರೆ ಮತ್ತು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಅಮೆರಿಕಾ ಬಯಸಿದರೆ ಭಾರತದ ಆರ್ಥಿಕ ಮತ್ತು ಮಿಲಿಟರಿ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡಬೇಕಾಗುವುದು, ಚೀನಾದಿಂದ ಹೊರಗೆ ಬರುವ ಅಮೆರಿಕಾ ಮತ್ತು ಜಪಾನ್ ಕಂಪನಿಗಳಿಗೆ ಭಾರತದಲ್ಲಿ ನೆಲೆಯೂರಲು ಕಾರ್ಯತಂತ್ರ ರೂಪಿಸಬೇಕಾಗುತ್ತದೆ ಎಂದು ವರದಿ ಉಲ್ಲೇಖಿಸಿದೆ. 

ಹಡ್ಸನ್ ಸಂಸ್ಥೆಯ ವರದಿಯಲ್ಲಿ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದ್ದು,  ಹಣದ ಮೂಲಕ ಚೀನಾದ ಕಡೆಯಲ್ಲಿರುವ ಶ್ರೀಲಂಕಾ ಮತ್ತು ಪಾಕಿಸ್ತಾನವನ್ನು  ತಮ್ಮ ಮೈತ್ರಿಯತ್ತ ಅಮೆರಿಕಾ ಪ್ರಯತ್ನಿಸಬಹುದು ಎಂದು ತಿಳಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT