ವಿದೇಶ

ಎಲ್ ಒಸಿಯಲ್ಲಿ ಭಾರತೀಯ ಸೈನಿಕರ ದಾಳಿಯಿಂದ ನಾಲ್ವರು ನಾಗರಿಕರು ಸಾವು: ಪಾಕಿಸ್ತಾನ ಸೇನೆ

Sumana Upadhyaya

ಇಸ್ಲಾಮಾಬಾದ್ :ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಾರತೀಯ ಸೈನಿಕರು ಗಡಿ ಉಲ್ಲಂಘಿಸಿ ಬಂದು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ನಾಗರಿಕರು ಹತ್ಯೆಯಾಗಿದ್ದಾರೆ ಎಂದು ಪಾಕಿಸ್ತಾನ ಸೇನೆ ಹೇಳಿದೆ.

ಪಾಕಿಸ್ತಾನ ಸೇನಾಪಡೆಯ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಖಾರ್, ನಿಕಿಯಾಲ್ ಮತ್ತು ಬಗ್ಸಾರ್ ವಲಯಗಳಲ್ಲಿ ನಾಗರಿಕರ ಮೇಲೆ ಗುರಿಯಾಗಿಟ್ಟುಕೊಂಡು ಭಾರತೀಯ ಸೇನಾ ಯೋಧರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೃತಪಟ್ಟ ನಾಲ್ವರು ನಾಗರಿಕರಲ್ಲಿ ಮಹಿಳೆ ಸೇರಿದ್ದಾರೆ. ಮತ್ತೊಬ್ಬರಿಗೆ ಗಾಯವಾಗಿದೆ. ಭಾರತೀಯ ಸೈನಿಕರ ಗುಂಡಿನ ದಾಳಿಗೆ ಪಾಕಿಸ್ತಾನ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

SCROLL FOR NEXT