ವಿದೇಶ

ಭಾರತದ ಭೂಭಾಗ ನಮ್ಮದು: ಹೊಸ ವಿವಾದಾತ್ಮಕ ನಕ್ಷೆಗೆ ನೇಪಾಳ ಸಂಸತ್ ಒಪ್ಪಿಗೆ!

Vishwanath S

ಕಾಠ್ಮಂಡು: ಭಾರತದ ಗಡಿಯಲ್ಲಿನ ಮೂರು ಪ್ರದೇಶಗಳನ್ನು ತನ್ನ ಪ್ರದೇಶ ಎಂದು ತೋರಿಸುವ ಹೊಸ ವಿವಾದಾತ್ಮಕ ನಕ್ಷೆಯನ್ನು ನೆರೆಯ ನೇಪಾಳ ಸಂಸತ್ ಸರ್ವಾನುಮತದಿಂದ ಅನುಮೋದಿಸಿದೆ. 

ಹೊಸ ನಕ್ಷೆಯ ಪ್ರಕಾರ ಲಿಂಪಿಯಾಧುರಾ, ಲಿಪುಲೆಖ್ ಮತ್ತು ಕಾಲಾಪಾನಿ ನೇಪಾಳಕ್ಕೆ ಸೇರಿದ್ದು ಎಂದು ತೋರಿಸಲಾಗಿದೆ. ಈ ಹೊಸ ತಿದ್ದುಪಡಿ ನಕ್ಷೆಗೆ ಸದನದ 57 ಸದಸ್ಯರೂ ಮಸೂದೆ ಪರವಾಗಿಯೇ ಮತ ಚಲಾಯಿಸಿದ್ದಾರೆ.

ಮೇ 8ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉತ್ತರಾಖಂಡದ ಧಾರ್ಚುಲಕ್ಕೆ ಲಿಪುಲೆಖ್ ಪಾಸ್ ಅನ್ನು ಸಂಪರ್ಕಿಸುವ 80 ಕಿ.ಮೀ ರಸ್ತೆಯನ್ನು ಉದ್ಘಾಟಿಸಿದ ನಂತರ ನೇಪಾಳ ತೀವ್ರವಾಗಿ ಪ್ರತಿಭಟಿಸಿತ್ತು. ನಂತರ ಹೊಸ ಭೂಪಟವನ್ನು ಬಿಡುಗಡೆ ಮಾಡಿತ್ತು. 

SCROLL FOR NEXT