ವಿದೇಶ

ಭಾರತದ ಮನವಿ ಹಿನ್ನೆಲೆ, ಅಮೆರಿಕಾದಲ್ಲಿ ಮುಂಬೈ ದಾಳಿಯ ಸಂಚುಕೋರ ರಾಣಾ ಮರು ಬಂಧನ

Nagaraja AB

ಲಾಸ್ ಎಂಜಲೀಸ್: 2008ರಲ್ಲಿ ನಡೆದ ಮುಂಬೈ ಉಗ್ರ ದಾಳಿಯ ಸಂಚುಕೋರ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂಬ ಮನವಿ ಮೇರೆಗೆ ಲಾಸ್ ಎಂಜಲೀಸ್ ನಲ್ಲಿ ಮತ್ತೆ ಬಂಧಿಸಲಾಗಿದೆ ಎಂದು ಅಮೆರಿಕಾದ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ. 

59 ವರ್ಷದ ರಾಣಾ,  ತನಗೆ ಕೋವಿಡ್-19 ಸೋಂಕು ತಗುಲಿದ್ದು, ಕರುಣೆ ತೋರಿ ಬಿಡುಗಡೆ ಮಾಡಬೇಕೆಂದು ಅಮೆರಿಕಾ ನ್ಯಾಯಾಲಯಕ್ಕೆ ಮನವಿ ಮಾಡಿದ ಬಳಿಕ ಆತನನ್ನು  ಇತ್ತೀಚಿಗೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, ಭಾರತದ ಕೋರಿಕೆ ಮೇರೆಗೆ ಮರು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

ಜೂನ್ 11 ರಂದು ರಾಣಾ ಆರಂಭಿಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅಮೆರಿಕಾದ ಜಿಲ್ಲಾ ನ್ಯಾಯಾಧೀಶ ಜಾಕ್ವೆಲಿನ್ ಚೊಲ್ಜಿಯಾನ್ ಜೂನ್ 30ರಂದು ಕ್ಯಾಲಿಪೋರ್ನಿಯಾದ ಜಿಲ್ಲಾ ನ್ಯಾಯಾಲಯದಲ್ಲಿ ರಾಣಾನಾ ಜಾಮೀನು ಅರ್ಜಿ ವಿಚಾರಣೆಯನ್ನು ನಿಗದಿಪಡಿಸಿದ್ದಾರೆ.  

ಈ ಸಂಬಂಧ ಜೂನ್ 22 ರೊಳಗೆ ಅರ್ಜಿ ಸಲ್ಲಿಸುವಂತೆ ರಾಣಾ ಪರ ವಕೀಲರಿಗೆ ತಿಳಿಸಲಾಗಿದೆ. ಜೂನ್ 26ರೊಳಗೆ ಫೆಡರಲ್ ಸರ್ಕಾರದ ಪ್ರತಿಕ್ರಿಯೆ ಬರಲಿದೆ. 

SCROLL FOR NEXT