ವಿದೇಶ

ಮುಂದುವರಿದ ದ್ವೇಷ:ಚೀನಾದ ಸೋಷಿಯಲ್ ಮೀಡಿಯಾಗಳಿಂದ ಪ್ರಧಾನಿ ಮೋದಿ ಭಾಷಣ, ವಿದೇಶಾಂಗ ಇಲಾಖೆ ವಕ್ತಾರರ ಹೇಳಿಕೆ ಡಿಲೀಟ್!

Sumana Upadhyaya

ಬೀಜಿಂಗ್: ಕಳೆದ ಗುರುವಾರ ಪ್ರಧಾನಿ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಭಾಷಣ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರರು ನೀಡಿದ್ದ ಹೇಳಿಕೆಗಳನ್ನು ಚೀನಾದ ಎರಡು ಸಾಮಾಜಿಕ ಮಾಧ್ಯಮಗಳು ಅಳಿಸಿಹಾಕಿವೆ ಎಂದು ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ-ಚೀನಾ ಸೈನಿಕರು ಲಡಾಕ್ ಗಡಿಭಾಗದಲ್ಲಿ ನಡೆಸಿದ ಸಂಘರ್ಷದ ನಂತರ ಈ ಬೆಳವಣಿಗೆ ನಡೆದಿದೆ. ಚೀನಾದ ಸೀನಾ ವೈಬೊ ಸೋಷಿಯಲ್ ಮೀಡಿಯಾ ಅಕೌಂಟ್ ನಿಂದ ವಿದೇಶಾಂಗ ಇಲಾಖೆ ವಕ್ತಾರರು ಕಳೆದ 18ರಂದು ನೀಡಿದ್ದ ಹೇಳಿಕೆಯನ್ನು ಸಹ ಡಿಲೀಟ್ ಮಾಡಲಾಗಿದೆ, ನಂತರ ಭಾರತದ ಅಧಿಕಾರಿಗಳು ಶ್ರೀವಾಸ್ತವ್ ಅವರ ಹೇಳಿಕೆಗಳ ಸ್ಕ್ರೀನ್ ಶಾಟ್ ತೆಗೆದು ಮರು ಪ್ರಕಟ ಮಾಡಿದ್ದಾರೆ ಎಂದು ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ಟ್ವಿಟ್ಟರ್ ನಂತೆ ಸೀನಾ ವೈಬೊ ಚೀನಾದಲ್ಲಿ ಪ್ರಮುಖ ಸೋಷಿಯಲ್ ಮೀಡಿಯಾವಾಗಿದ್ದು ಲಕ್ಷಾಂತರ ಬಳಕೆದಾರರನ್ನು ಹೊಂದಿದೆ. ಪ್ರಧಾನಿ ಮೋದಿ ಸೇರಿದಂತೆ ವಿಶ್ವದ ಹಲವು ನಾಯಕರು ಚೀನಾ ದೇಶದವರೊಂದಿಗೆ ಸಂವಹನ ನಡೆಸಲು ಬಳಸುತ್ತಾರೆ.

ನಿಯಮವನ್ನು ಉಲ್ಲಂಘಿಸಿರುವುದರಿಂದ ಕಮೆಂಟ್ ನ್ನು ಓದಲು ಸಾಧ್ಯವಾಗುತ್ತಿಲ್ಲ ಎಂದು ವಿಚಾಟ್ ಕೂಡ ಹೇಳಿದೆ.

SCROLL FOR NEXT