ವಿದೇಶ

ಶ್ರೀಲಂಕಾ ಸಂಸತ್ತು ವಿಸರ್ಜನೆಗೆ ಮುಂದಾದ ರಾಜಪಕ್ಸ

Srinivas Rao BV

ಕೊಲೊಂಬೋ: ಶ್ರೀಲಂಕಾ ಸರ್ಕಾರ ಅನಿಶ್ಚಿತತೆಯಲ್ಲಿದ್ದು ಸಂಸತ್ ನ್ನು ವಿಸರ್ಜಿಸಲು ರಾಷ್ಟ್ರಾಧ್ಯಕ್ಷ ಗೊಟಬಾಯ ರಾಜಪಕ್ಸ ನಿರ್ಧರಿಸಿದ್ದಾರೆ. 

ಶ್ರೀಲಂಕಾ ಸರ್ಕಾರ ಅನಿಶ್ಚಿತತೆಯ ಹಾದಿಯಲ್ಲಿದ್ದು, ಯಾವುದೇ ಕ್ಷಣದಲ್ಲಿ ಉರುಳುವ ಸಾಧ್ಯತೆಯಿದೆ ಆದ್ದರಿಂದ ಸಂಸತ್ ವಿಸರ್ಜನೆಗೆ ಮುಂದಾಗುತ್ತಿದ್ದಾರೆ ಎಂದು ಶ್ರೀಲಂಕಾ ವಿದೇಶಾಂಗ ಸಚಿವ ದಿನೇಶ್‌ ಗುಣವರ್ಧನೆ ತಿಳಿಸಿದ್ದಾರೆ.

2015ರ ಸೆ.1ರಿಂದ ಅಸ್ತಿತ್ವಕ್ಕೆ ಬಂದಿರುವ ಸಂಸತ್ತಿನ ಅವಧಿ ಇದೇ ವರ್ಷ ಆಗಸ್ಟ್‌ ಕೊನೆಯವರೆಗೆ ಇದೆ. ಕಳೆದ ಡಿಸೆಂಬರ್‌ನಲ್ಲಿ ರಾಷ್ಟ್ರಾಧ್ಯಕ್ಷರಾಗಿದ್ದ ಗೊಟಬಾಯ, ತಮ್ಮ ಸಹೋದರ ಮಹಿಂದಾ ರಾಜಪಕ್ಸ ಅವರನ್ನು ಹಂಗಾಮಿ ಪ್ರಧಾನಿಯನ್ನಾಗಿ ನಿಯೋಜಿಸಿದ್ದರು.

SCROLL FOR NEXT