ವಿದೇಶ

2 ಬಿಳಿ ಜಿರಾಫೆಗಳ ಹತ್ಯೆ: ಮನುಷ್ಯನ ಕ್ರೌರ್ಯಕ್ಕೆ ಅಪರೂಪದ ಸಂತತಿಯೇ ಸರ್ವನಾಶ! 

Srinivas Rao BV

ಕೀನ್ಯಾ: ಮನುಷ್ಯನ ಕ್ರೌರ್ಯ, ದುರಾಸೆ, ದಾಹಗಳಿಗೆ ಅದಿನ್ನೆಷ್ಟು ಜೀವಸಂಕುಲಗಳು ಸರ್ವನಾಶವಾಗಬೇಕೋ ಗೊತ್ತಿಲ್ಲ. ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿರುವುದು ಭೂಮಿಯ ಮೇಲಿದ್ದ ಕೊನೆಯ, ಅತಿ ಅಪರೂಪದ ಬಿಳಿ ಜಿರಾಫೆಗಳ ಸಂತತಿ! 

ಕೀನ್ಯಾದ ಈಶಾನ್ಯ ಭಾಗದ ಕಾಡಿನಲ್ಲಿ ಮೂರು ಬಿಳಿಯ ಜಿರಾಫೆಗಳು ಸ್ವಚ್ಚಂದವಾಗಿ ಓಡಾಡಿಕೊಂಡಿದ್ದವು. ಆದರೆ ಕಾಡಿನ ಭಾಗದಲ್ಲಿರುವ ಹಳ್ಳಿಯ ಜನ ಮೂರು ಜಿರಾಫೆಗಳ ಪೈಕಿ 2 ಜಿರಾಫೆಗಳನ್ನು ಹತ್ಯೆ ಮಾಡಿ ತಿಂದಿದ್ದಾರೆ. ಅವುಗಳ ಪಳಯುಳಿಕೆಗಳು ಈಗ ಪತ್ತೆಯಾಗಿದೆ ಎಂದು ಕೀನ್ಯಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
 
ಇಶಾಕ್ಬಿನಿ ಅಭಯಾರಣ್ಯ ಪ್ರದೇಶದಲ್ಲಿ 2017 ರಲ್ಲಿ ಬಿಳಿಯ ಜಿರಾಫೆ ತನ್ನ ಮರಿಯೊಂದಿಗೆ ಕಾಣಿಸಿಕೊಂಡಿತ್ತು. ಕಳೆದ ವರ್ಷ ಹೆಣ್ಣು ಜಿರಾಫೆ ಇನ್ನೊಂದು ಮರಿ ಜಿರಾಫೆಗೆ ಜನ್ಮ ನೀಡಿತ್ತು. ಆದರೆ ಈ ಪೈಕಿ 2 ಜಿರಾಫೆಗಳು ಹಲವು ದಿನಗಳಿಂದ ನಾಪತ್ತೆಯಾಗಿತ್ತು. ಈಗ ಅದರ ಪಳಯುಳಿಕೆಗಳು ಕಂಡುಬಂದಿದ್ದು 1 ತಿಂಗಳ ಹಿಂದೆ 2 ಜಿರಾಫೆಗಳನ್ನು ಹತ್ಯೆ ಮಾಡಿ ಕೊಂದಿದ್ದಾರೆ. ಪರಿಣಾಮ ಒಂದು ಗಂಡು ಬಿಳಿ ಜಿರಾಫೆ ಮಾತ್ರ ಉಳಿದುಕೊಂಡಿದ್ದು, ಭೂಮಿಯ ಮೇಲಿದ್ದ ಕೊನೆಯ ಬಿಳಿ ಜಿರಾಫೆ ಸಂತತಿ ಅಳಿದುಹೋಗಿದೆ.

SCROLL FOR NEXT