ವಿದೇಶ

ವಿಶ್ವಸಂಸ್ಥೆಯನ್ನೂ ಬಿಡದೆ ಕಾಡಿದ ಕೊರೋನ ಸೋಂಕು!

Srinivas Rao BV

ಯುನೈಟೆಡ್ ನೇಷನ್ಸ್: ಕೊರೋನ ಸೋಂಕು ಎಲ್ಲರನ್ನು ಅವರಿಸಿಕೊಳ್ಳುತ್ತಿದೆ. ಈಗ ಮಾರಕ ಸೋಂಕು  ವಿಶ್ವಸಂಸ್ಥೆಯನ್ನು  ಬಿಡೆದೆ ಆವರಿಸಿಕೊಂಡಿದೆ. 

ಫಿಲಿಪೈನ್ಸ್‌ನ ಶಾಶ್ವತ ಕಾರ್ಯಾಚರಣೆಯಿಂದ ವಿಶ್ವಸಂಸ್ಥೆಯ ಪ್ರತಿನಿಧಿಯಲ್ಲಿ ಕೋವಿಡ್  ಸೋಂಕು ಕಾಣಿಸಿಕೊಂಡಿದೆ. ಪರೀಕ್ಷೆಯಿಂದ ಇದು ದೃಡಪಟ್ಟಿದೆ. ಇದು ನ್ಯೂಯಾರ್ಕ್‌ನ  ಕೇಂದ್ರ ಕಚೇರಿಯಲ್ಲಿ ಅವರಿಸಿದ  ಮೊದಲ ಕೋವಿಡ್ ಪ್ರಕರಣವಾಗಿದೆ.

ಫಿಲಿಪೈನ್ ಮಿಷನ್ ನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು, ಇತರ ಎಲ್ಲಾ ಸಿಬ್ಬಂದಿಗಳಿಗೂ ಸ್ವಯಂ ತಪಾಸಣೆಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ. ಈ ಪ್ರಕರಣ ಬಹಿರಂಗವಾದಾಗಿನಿಂದಲೂ ನಮ್ಮೆಲ್ಲರಿಗೂ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ವಿಶ್ವಸಂಸ್ಥೆಯಲ್ಲಿರುವ ಫಿಲಿಪೈನ್ಸ್ ನ ಹಂಗಾಮಿ ರಾಯಭಾರಿ ಸಂದೇಶ ರವಾನಿಸಿರುವುದನ್ನು ರಾಯ್ಟರ್ಸ್ ವರದಿ ಮಾಡಿದೆ.

SCROLL FOR NEXT