ವಿದೇಶ

ಕೊರೋನಾ ವೈರಸ್ ಕುರಿತ ಹೇಳಿಕೆ ನೀಡಿ ಎಡವಟ್ಟು ಮಾಡಿಕೊಂಡ ಟ್ರಂಪ್!

Srinivas Rao BV

ವಾಷಿಂಗ್ ಟನ್: ಕೊರೋನಾ ವೈರಸ್ ಕುರಿತು ಹೇಳಿಕೆ ನೀಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಡವಟ್ಟು ಮಾಡಿಕೊಂಡಿದ್ದಾರೆ. 

ಗೂಗಲ್ ಸಂಸ್ಥೆ ಕೊರೋನಾ ಪತ್ತೆ ಹಚ್ಚುವ, ಸ್ಕ್ರೀನಿಂಗ್ ಪೋರ್ಟಲ್ ನ್ನು ನಿರ್ಮಿಸುತ್ತಿದೆ, ಶೀಘ್ರವೇ ಇದನ್ನು ಮಾಡಲಾಗುತ್ತಿದೆ. ಕೊರೋನಾ ಸೋಂಕನ್ನು ಖಚಿತಪಡಿಸುವುದು ಹಾಗೂ ಹತ್ತಿರದಲ್ಲೇ ಪರೀಕ್ಷೆಗೆ ಅನುಕೂಲವಾಗುವ ಪ್ರದೇಶವನ್ನು ತಿಳಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದ್ದರು, ಆದರೆ ಗೂಗಲ್ ಬೇರೆಯದ್ದೇ ಮಾಹಿತಿ ನೀಡಿದೆ. 

ಸುಮಾರು 1,700 ಇಂಜಿನಿಯರ್ ಗಳು ಇದಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪ್ರತಿಮ ಪ್ರಗತಿ ಸಾಧಿಸಿದ್ದಾರೆ ಎಂದು ಟ್ರಂಪ್ ಹೇಳಿದ್ದರು. ಆದರೆ ಈ ಬಗ್ಗೆ ಗೂಗಲ್ ಸಂಸ್ಥೆ ಸ್ಪಷ್ಟನೆ ನೀಡಿದ್ದು, ತಾನು ಈರೀತಿಯ ಯಾವುದೇ ಪೋರ್ಟಲ್ ನಿರ್ಮಾಣ ಮಾಡ್ತಿಲ್ಲ ಆದರೆ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯ ಪ್ರದೇಶದ ಜನತೆಗೆ ಕೊರೋನಾ ಪರೀಕ್ಷೆ ನಡೆಸುವ ಪ್ರದೇಶಗಳ ಬಗ್ಗೆ ಮಾಹಿತಿ ನೀಡಲು  ತನ್ನ ಅಡಿಯಲ್ಲೇ ಬರುವ ವೆರಿಲಿ ಸಣ್ಣ ಪ್ರಾಯೋಗಿಕ ವೆಬ್ ಸೈಟ್ ನ್ನು ನಿರ್ಮಿಸುತ್ತಿದೆ ಎಂದು ಹೇಳಿದೆ.

ವೆರಿಲಿ ಸಂಸ್ಥೆ ಹೊರತರುತ್ತಿರುವ ವೆಬ್ ಸೈಟ್ ಇನ್ನೂ ನಿರ್ಮಾಣ ಹಂತದಲ್ಲಿದ್ದು, ಪ್ರಾರಂಭಿಕ ಹಂತದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯ ಪ್ರದೇಶದಲ್ಲಿ ಜಾರಿಗೆ ತರಲಾಗುತ್ತದೆ ನಂತರದ ದಿನಗಳಲ್ಲಿ ಬೇರೆಡೆಗೆ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಗೂಗಲ್ ಹೇಳಿದೆ. 

SCROLL FOR NEXT