ವಿದೇಶ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗೆ ಕೊರೋನಾ ಸೋಂಕು ದೃಢ 

Srinivas Rao BV

ಲಂಡನ್: ಕೊರೋವಾ ವೈರಸ್ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದ್ದು, ಇತ್ತೀಚಿನ ವರದಿಯ ಪ್ರಕಾರ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ. 

ಈ ಬಗ್ಗೆ ಸ್ವತಃ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಟ್ವೀಟ್ ಮಾಡಿಕೊಂಡಿದ್ದು, ಕಳೆದ 24 ಗಂಟೆಗಳಿಂದ ನಾನು ಕೊರೋನಾ ರೋಗಲಕ್ಷಣಗಳನ್ನು ಎದುರಿಸುತ್ತಿದ್ದೆ. ಈಗ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 

ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ನಾನು ಸ್ವಯಂ ನಿಯಂತ್ರಣ ವಿಧಿಸಿಕೊಳ್ಳುತ್ತಿದ್ದೇನೆ. ಆದರೆ ಸರ್ಕಾರದ ಕೆಲಸಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ. ಮಾ.25 ರಂದು ಬ್ರಿಟನ್ ನ ರಾಜವಂಶಸ್ಥ ಪ್ರಿನ್ಸ್ ಚಾರ್ಲ್ಸ್ ಗೂ ಕೊರೋನಾ ಸೋಂಕು ದೃಢಪಟ್ಟಿತ್ತು.

SCROLL FOR NEXT