ವಿದೇಶ

ಕೊರೋನಾ ವೈರಸ್ ವುಹಾನ್ ಲ್ಯಾಬ್ ನಲ್ಲಿಯೇ ಹುಟ್ಟಿಕೊಂಡಿದೆ: ಡೊನಾಲ್ಡ್ ಟ್ರಂಪ್

Lingaraj Badiger

ನ್ಯೂಯಾರ್ಕ್: ಜಗತ್ತಿನಾದ್ಯಂತ 2,30,000 ಮಂದಿಯನ್ನು ಬಲಿ ಪಡೆದಿರುವ ಮಹಾಮಾರಿ ಕೊರೋನಾ ವೈರಸ್ ಚೀನಾದ ವುಹಾನ್ ಲ್ಯಾಬ್ ನಿಂದಲೇ ಜಗತ್ತಿಗೆ ವ್ಯಾಪಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆರೋಪಿಸಿದ್ದಾರೆ.

ಕೊರೋನಾ ವೈರಸ್ ಕುರಿತು ಇಂದು ವೈಟ್ ಹೌಸ್ ನಲ್ಲಿ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಟ್ರಂಪ್, ವುಹಾನ್ ಇನ್ಸಿಟ್ಯೂಟ್ ಆಫ್ ವೈರಾಲಜಿಯಲ್ಲೇ ಕೊರೋನಾ ವೈರಸ್ ಹುಟ್ಟಿಕೊಂಡಿದೆ ಎಂದು ಅತ್ಯಂತ ವಿಶ್ವಾಸದಿಂದ ಹೇಳಿದ್ದಾರೆ.

ತಮ್ಮ ಆರೋಪದ ಬಗ್ಗೆ ಯಾವುದೇ ವಿವರ ನೀಡಲು ನಿರಾಕರಿಸಿದೆ ಟ್ರಂಪ್, ಆ ಬಗ್ಗೆ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಸತ್ಯ ಹೊರ ಬರಲಿದೆ ಎಂದರು.

ನಿಮ್ಮ ಈ ವಿಶ್ವಾಸಕ್ಕೆ ಕಾರಣವೇನು ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್, ನಾನು ಆ ಬಗ್ಗೆ ಏನನ್ನು ಹೇಳುವುದಿಲ್ಲ. ಅದಕ್ಕೆ ನನಗೆ ಅನುಮತಿ ನೀಡಿಲ್ಲ ಎಂದರು.ಆದರೆ ಇದಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಹೊಣೆಮಾಡಲು ಅಮೆರಿಕ ಅಧ್ಯಕ್ಷರು ನಿರಾಕರಿಸಿದ್ದಾರೆ.

SCROLL FOR NEXT