ಹನಿವೆಲ್ಲ್ ಫ್ಯಾಕ್ಟರಿಗೆ ಭೇಟಿ ನೀಡಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಶೀಲನೆ 
ವಿದೇಶ

ಮಾಸ್ಕ್ ತಯಾರಿಕೆ ಫ್ಯಾಕ್ಟರಿಯಲ್ಲೇ ಮಾಸ್ಕ್ ಧರಿಸಲು ನಿರಾಕರಿಸಿದ ಡೊನಾಲ್ಡ್ ಟ್ರಂಪ್!

ಮಾಸ್ಕ್, ಗ್ಲೌಸ್ ಇತ್ಯಾದಿ ವೈಯಕ್ತಿಕ ಸುರಕ್ಷತೆ ಸಾಧನ(ಪಿಪಿಇ) ತಯಾರಿಸುವ ಕಾರ್ಖಾನೆಗೆ ಭೇಟಿ ನೀಡಿ ಅಲ್ಲಿ ಪರಿಶೀಲನೆ ನಡೆಸುವ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಸ್ಕ್ ಧರಿಸಲು ನಿರಾಕರಿಸಿದ ಘಟನೆ ನಡೆಯಿತು.

ಫಿಯೊನಿಕ್ಸ್(ಅರಿಜೊನಾ): ಮಾಸ್ಕ್, ಗ್ಲೌಸ್ ಇತ್ಯಾದಿ ವೈಯಕ್ತಿಕ ಸುರಕ್ಷತೆ ಸಾಧನ(ಪಿಪಿಇ) ತಯಾರಿಸುವ ಕಾರ್ಖಾನೆಗೆ ಭೇಟಿ ನೀಡಿ ಅಲ್ಲಿ ಪರಿಶೀಲನೆ ನಡೆಸುವ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಸ್ಕ್ ಧರಿಸಲು ನಿರಾಕರಿಸಿದ ಘಟನೆ ನಡೆಯಿತು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಅಮೆರಿಕದಲ್ಲಿ ಕೊರೋನಾ ವೈರಸ್ ಗೆ ಅಧಿಕ ಮಂದಿ ಮೃತಪಟ್ಟಿದ್ದು, ದೇಶದ ಆರ್ಥಿಕತೆ ಮೇಲೆ ತೀವ್ರ ಹೊಡೆತ ಬಿದ್ದಿದೆ ಎಂಬ ಮಾತುಗಳನ್ನು ಒಪ್ಪಿಕೊಂಡರು. ಸಾಮಾಜಿಕ ಅಂತರ ಕ್ರಮಗಳನ್ನು ತೆಗೆಯುವುದು ಮತ್ತು ಆರ್ಥಿಕ ಪುನಶ್ಚೇತನಕ್ಕೆ ನಿರ್ಬಂಧಗಳನ್ನು ತೆಗೆದುಹಾಕುವುದರಿಂದ ಹೆಚ್ಚಿನ ಸಾವು ಪ್ರಕರಣಗಳು ಸಂಭವಿಸಬಹುದೇ ಎಂದು ಕೇಳಿದಾಗ ಅದು ಸಾಧ್ಯತೆಯಿದೆ ಎಂದು ಹೇಳಿದರು.

ಕೊರೋನಾ ವೈರಸ್ ಇದೆ ಎಂದು ಮನೆಯೊಳಗೆ, ಅಪಾರ್ಟ್ ಮೆಂಟ್ ಒಳಗೆ ಅಥವಾ ಇನ್ನಾವುದೇ ಕಡೆಗಳಲ್ಲಿ ಎಷ್ಟು ದಿನ ಜನರನ್ನು ಬಂಧಿಸಿಡಬಹುದು, ಒಂದಲ್ಲ ಒಂದು ದಿನ ದೇಶವನ್ನು ನಿತ್ಯದ ಚಟುವಟಿಕೆಗಳಿಗೆ ತೆರೆಸಿಕೊಳ್ಳಲೇಬೇಕು ಎಂದು ಅಲ್ಲಿ ನೆರೆದಿದ್ದ ಪತ್ರಕರ್ತರಿಗೆ ಹೇಳಿದರು.

ಅವರು ಅರಿಜೊನಾ ಫೆಡರಲ್ ರಾಜ್ಯದ ಫಿಯೊನಿಕ್ಸ್ ನಲ್ಲಿರುವ ಹನಿವೆಲ್ಲ್ ಫ್ಯಾಕ್ಟರಿಗೆ ಭೇಟಿ ನೀಡಿ ಮಾಸ್ಕ್ ತಯಾರಿಕೆಯನ್ನು ಪರಿಶೀಲಿಸಿದರು. ಕೊರೋನಾ ವೈರಸ್ ದೇಶದಲ್ಲಿ ಕಾಣಿಸಿಕೊಂಡು ವ್ಯಾಪಕವಾಗಿ ಹಬ್ಬಿದ ನಂತರ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ ಬಿಟ್ಟು ಬೇರೆ ಕಡೆ ಕೈಗೊಂಡ ಬಹುದೊಡ್ಡ ಪ್ರವಾಸವಾಗಿತ್ತು.

ಕಂಪೆನಿಯ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡ ಟ್ರಂಪ್ :ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸಿ ಎಂಬುದು ಹನಿವೆಲ್ಲ್ ಫ್ಯಾಕ್ಟರಿಯಲ್ಲಿ ಎಲ್ಲಾ ಕಡೆ ಬರೆದಿರುವ ನಿಯಮ. ಕೊರೋನಾ ವೈರಸ್ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಇತರರಿಗೆ ಮಾಸ್ಕ್ ಪೂರೈಸುವಲ್ಲಿ ಹನಿವೆಲ್ಲ್ ಫ್ಟಾಕ್ಟರಿ ಸಿಬ್ಬಂದಿಯ ಕೆಲಸವನ್ನು ಶ್ಲಾಘಿಸಿದ ಅಧ್ಯಕ್ಷ ಟ್ರಂಪ್ ಸ್ವತಃ ಮಾಸ್ಕ್ ಧರಿಸಲೇ ಇಲ್ಲ. ಅಲ್ಲಿನ ಸಿಬ್ಬಂದಿ ಮಾಸ್ಕ್ ಧರಿಸಿ ಎಂದಾಗ ಧರಿಸಲು ನಿರಾಕರಿಸಿದರು. ಟ್ರಂಪ್ ಜೊತೆಗೆ ಬಂದಿದ್ದ ಇತರ ಅಧಿಕಾರಿಗಳು ಸಹ ಮಾಸ್ಕ್ ಧರಿಸದೇ ಇದ್ದುದು ಕಂಡುಬಂತು.  

ಅಮೆರಿಕದ ಅಧಿಕಾರ ಶಕ್ತಿಕೇಂದ್ರ ವಾಷಿಂಗ್ಟನ್ ನ ವೈಟ್ ಹೌಸ್ ನಲ್ಲಿ ಕೊರೋನಾ ವೈರಸ್ ತಡೆಗೆ ಮಾಸ್ಕ್ ಧರಿಸಿ ಎಂದು ಎಲ್ಲರೂ ಹೇಳಿಕೊಂಡು ಬರುತ್ತಿದ್ದಾರೆ. ಟ್ರಂಪ್ ಅವರ ಪತ್ನಿ ಮೆನಾಲಿಯಾ ಟ್ರಂಪ್ ಕೂಡ ಜನರಿಗೆ ಮಾಸ್ಕ್ ಧರಿಸಿ ಎಂದು ಕರೆಕೊಡುತ್ತಾರೆ. ಆದರೆ ಆರಂಭದಿಂದಲೂ ಡೊನಾಲ್ಡ್ ಟ್ರಂಪ್ ಮಾತ್ರ ಮಾಸ್ಕ್ ಧರಿಸಿದ್ದು ಕಂಡಿದ್ದೇ ಇಲ್ಲ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ನಡೆಗೆ ವಿರೋಧ ಪಕ್ಷದವರು ಮತ್ತು ಸಾರ್ವಜನಿಕರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಂಡೀಪುರದಲ್ಲಿ ದಂತವಿಲ್ಲದ ಆನೆಯ ಕಳೇಬರ ಪತ್ತೆ; ನಟೋರಿಯಸ್ ಬವಾರಿಯಾ ಗ್ಯಾಂಗ್‌ ನಂಟಿನ ಶಂಕೆ

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಅವನನ್ನು ಹಾಳು ಮಾಡಿದ್ದೇ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್'!: ವೈಭವ್ ಸೂರ್ಯವಂಶಿ ಕುರಿತು ಗಂಭೀರ್‌ ವಿರುದ್ಧ ವಿಶ್ವಕಪ್‌ ವಿಜೇತ ಆಟಗಾರ ಕಿಡಿ