ವಿದೇಶ

ಬಲಿಷ್ಠ, ಶ್ರೀಮಂತ ಭಾರತ ಚೀನಾದ ಬಲಿಷ್ಠ ಮಹತ್ವಾಕಾಂಕ್ಷೆಗಳನ್ನು ನಿರಾಶೆಗೊಳಿಸಬಲ್ಲದು: ಅಮೆರಿಕ ಸೆನೆಟರ್

Srinivas Rao BV

ವಾಷಿಂಗ್ ಟನ್: ಅಮೆರಿಕ-ಚೀನಾ ಶೀಥಲ ಸಮರದಲ್ಲಿ ತೊಡಗಿದ್ದು, ಚೀನಾವನ್ನು ಮಣಿಸಲು ಅಮೆರಿಕ ಭಾರತವನ್ನು ದಾಳವನ್ನಾಗಿ ಉಪಯೋಗಿಸಿಕೊಳ್ಳಲು ಯತ್ನಿಸುತ್ತಿದೆ. ಇದರ ಭಾಗವಾಗಿ ಅಮೆರಿಕದ ಟೆಕ್ಸಾಸ್ ನ ಸೆನೆಟರ್ ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಲೇಖನ ಬರೆದಿದ್ದು, ಚೀನಾವನ್ನು ಮಣಿಸಲು ಅಮೆರಿಕ ಭಾರತವನ್ನು ಮೇಲೆತ್ತಬೇಕು ಎಂದು ಹೇಳಿದ್ದಾರೆ.

ಚೀನಾದ ಆಧಿಪತ್ಯದ ಮಹತ್ವಾಕಾಂಕ್ಷೆಗಳನ್ನು ಭಗ್ನಗೊಳಿಸುವುದಕ್ಕೆ ಶ್ರೀಮಂತ, ಶಕ್ತಿವಂತ, ಪ್ರಜಾಸತ್ತೀಯ ಭಾರತಕ್ಕೆ ಮಾತ್ರ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಭಾರತದ ಬೆಳವಣಿಗೆ ದರವನ್ನು ದೀರ್ಘಾವಧಿಯಲ್ಲಿ ಮೆಲೆತ್ತುವುದು ಅಮೆರಿಕದ ಆದ್ಯತೆಯ ವಿದೇಶಾಂಗ ನೀತಿಯ ಗುರಿಯಾಗಿರಬೇಕೆಂದು ರಿಪಬ್ಲಿಕನ್ ಸೆನೆಟರ್ ಜಾನ್ ಕಾರ್ನಿನ್ ಅಭಿಪ್ರಾಯಪಟ್ಟಿದ್ದಾರೆ. 

ಕೊರೋನಾ ಸೋಂಕು, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಉಪದ್ರವ, ಹಾಂಕ್ ಕಾಂಗ್ ನಲ್ಲಿ ಚೀನಾದ ದಬ್ಬಾಳಿಕೆ ಮುಂತಾದ ವಿಷಯಗಳಲ್ಲಿ ಅಮೆರಿಕ-ಶೀತಲ ಸಮರ ನಡೆಯುತ್ತಿದೆ.

ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಪ್ರಕಟವಾಗಿರುವ ತಮ್ಮ ಲೇಖನವನ್ನು ಹಂಚಿಕೊಂಡಿರುವ ಸೆನೆಟರ್ ಜಾನ್ ಕಾರ್ನಿನ್, ಟ್ವೀಟ್ ಮಾಡಿದ್ದು ಅಮೆರಿಕ ತನಗೆ ಅತ್ಯಂತ ಮುಖ್ಯವಾಗಿದ್ದ ಶೀತಲ ಸಮರಗಳ ಗೆಲುವುಗಳನ್ನು ಸಾಧಿಸಿರುವುದು ಪ್ರಜಾಪ್ರಭುತ್ವ ದೇಶಗಳಿಗೆ  ಶ್ರ‍ೀಮಂತವಾಗಲು ಸಹಾಯ ಮಾಡುವುದರಿಂದ, ಈಗ ಭಾರತಕ್ಕೆ ದೀರ್ಘಾವಧಿಯ ಬೆಳವಣಿಗೆ ದರ ಮೇಲೆತ್ತುವುದಕ್ಕೆ ಸಹಾಯ ಮಾಡುವುದು ಅಮೆರಿಕದ ಆದ್ಯತೆಯ ವಿದೇಶಾಂಗ ನೀತಿಯಾಗಿರಬೇಕೆಂದು ಹೇಳಿದ್ದಾರೆ. 

ಇನ್ನು ಅಮೆರಿಕದ ತಜ್ಞರು ಸಹ ಭಾರತ ಅಮೆರಿಕದ ಸ್ವಾಭಾವಿಕ ಮಿತ್ರ ರಾಷ್ಟ್ರವಾಗಿದ್ದು, ಹೊಸದಾಗಿ ಚೀನಾದ ಜೊತೆ ಶೀತಲ ಸಮರ ಎದುರಿಸುವ ರಾಷ್ಟ್ರವಾಗಿದೆ ಎಂದು ವಿಶ್ಲೇಷಿಸಿದ್ದಾರೆ.

SCROLL FOR NEXT