ಪೋಸ್ಟರ್ 
ವಿದೇಶ

ಇದು ನವ ಪಾಕಿಸ್ತಾನವಾ? ಪಾಕ್ ಬೀದಿಗಳಲ್ಲಿ ಮೋದಿ, ಅಭಿನಂದನ್ ಪೋಸ್ಟರ್‌!

ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿ(ದೇಶದ ಸಂಸತ್) ನಲ್ಲಿ ಬಲೂಚಿಸ್ತಾನ್ ಸಂಸದರು ಮೋದಿ... ಮೋದಿ... ಮೋದಿ... ಎಂದು ಘೋಷಣೆ ಕೂಗಿದ್ದರು. ಇದರಿಂದ ವ್ಯಗ್ರಗೊಂಡ ಪಾಕಿಸ್ತಾನ ವಿದೇಶಾಂಗ ಸಚಿವ ಖುರೇಷಿಗೆ... ಸದನದಿಂದ ಸಭಾತ್ಯಾಗ ನಡೆಸಿ ಹೊರ ನಡೆದಿದ್ದರು ಎಂದೆಲ್ಲಾ ವರದಿಯಾಗಿತ್ತು. ಆದರೆ ಇದು ನಕಲಿ ಎಂದು ವರದಿಯಾಗಿತ್ತು.

ಇಸ್ಲಾಮಾಬಾದ್: ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿ(ದೇಶದ ಸಂಸತ್) ನಲ್ಲಿ ಬಲೂಚಿಸ್ತಾನ್ ಸಂಸದರು ಮೋದಿ... ಮೋದಿ... ಮೋದಿ... ಎಂದು ಘೋಷಣೆ ಕೂಗಿದ್ದರು. ಇದರಿಂದ ವ್ಯಗ್ರಗೊಂಡ ಪಾಕಿಸ್ತಾನ ವಿದೇಶಾಂಗ ಸಚಿವ ಖುರೇಷಿಗೆ... ಸದನದಿಂದ ಸಭಾತ್ಯಾಗ ನಡೆಸಿ ಹೊರ ನಡೆದಿದ್ದರು ಎಂದೆಲ್ಲಾ ವರದಿಯಾಗಿತ್ತು. ಆದರೆ ಇದು ನಕಲಿ ಎಂದು ವರದಿಯಾಗಿತ್ತು. 

ಈ ಘಟನೆ ನಡೆದು...  ಎರಡು ದಿನಗಳೂ ಆಗಿಲ್ಲ. ಪಾಕಿಸ್ತಾನದಲ್ಲಿ ಈಗ ಮೋದಿ ಪೋಸ್ಟರ್ ಕಾಣಿಸಿಕೊಂಡಿವೆ...! ಪ್ರಧಾನಿ ಮೋದಿ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಜೊತೆಗೆ ಸಂಸದ ಅಯಾಜ್ ಸಾಧಿಕ್ ಇರುವ ಪೋಸ್ಟರ್ ಗಳು ಕಾಣಿಸಿಕೊಂಡಿವೆ. ಅದರಲ್ಲಿ ಪಾಕ್ ಸಂಸದ ಅಯಾಜ್ ಸಾಧಿಕ್ ಮೋದಿ ಸ್ನೇಹಿತ ಎಂದು ಟ್ರೋಲ್ ಮಾಡಿರುವುದು ಗಮನಾರ್ಹವಾಗಿದೆ.

ಪಾಕಿಸ್ತಾನ ಸಂಸತ್ತಿನಲ್ಲಿ ಮುಸ್ಲಿಂ ಲೀಗ್-ಎನ್ ನಾಯಕ ಸಾಧಿಕ್ ಮಾತನಾಡಿ.. ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡದಿದ್ದರೆ ರಾತ್ರಿ 9 ಗಂಟೆಗೆ ಭಾರತ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂದು ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ ಹೇಳಿದ್ದು ತಮಗೆ ಈಗಲೂ ನೆನಪಿದೆ.

ಆ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಇಮ್ರಾನ್ ಖಾನ್ ನಿರಾಕರಿಸಿದ್ದರು. ಆದರೆ, ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ  ಮಾತ್ರ  ಹಾಜರಾಗಿದ್ದರು. ಸಭೆಯಲ್ಲಿ ಸೇನಾ ಮುಖ್ಯಸ್ಥ ಬಾಜ್ವಾ ಕೂಡ ಉಪಸ್ಥಿತರಿದ್ದರು. ದಯವಿಟ್ಟು ಅಭಿನಂದನ್ ವರ್ಧಮಾನ್ ಅವರನ್ನು ಬಿಟ್ಟು ಬಿಡಿ. ಇಲ್ಲದಿದ್ದರೆ ರಾತ್ರಿ 9 ಗಂಟೆಗೆ ಭಾರತ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂದು ಸಚಿವ ಖುರೇಷಿ ಎಚ್ಚರಿಸಿದ್ದರು. ಆ ಕ್ಷಣದಲ್ಲಿ  ಸೇನಾ ಮುಖ್ಯಸ್ಥ ಬಾಜ್ವಾ ಕಾಲುಗಳು ನಡುಗುತ್ತಿದ್ದವು ಸಾಧಿಕ್  ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ