ವಿದೇಶ

ನ್ಯೂಯಾರ್ಕ್ ಅಸೆಂಬ್ಲಿ ಚುನಾವಣೆಯಲ್ಲಿ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್ ಪುತ್ರ ಗೆಲುವು

Nagaraja AB

ನ್ಯೂಯಾರ್ಕ್: ನ್ಯೂಯಾರ್ಕ್ ಸ್ಟೇಟ್  ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ  ಚಲನಚಿತ್ರ ನಿರ್ದೇಶಕಿ, ನಿರ್ಮಾಪಕಿ  ಮೀರಾ ನಾಯರ್ ಪುತ್ರ ಭಾರತೀಯ-ಉಗಾಂಡಾದ ಜೊಹ್ರಾನ್ ಕ್ವಾಮೆ ಮಮ್ದಾನಿ ಗೆಲುವು ಸಾಧಿಸಿದ್ದಾರೆ. ನ್ಯೂಯಾರ್ಕ್ ರಾಜ್ಯ ಕಚೇರಿಗೆ ಆಯ್ಕೆಯಾಗಿರುವ ಇಬ್ಬರು ಭಾರತೀಯ ಮೂಲದವರಲ್ಲಿ ಇವರು ಕೂಡಾ ಒಬ್ಬರಾಗಿದ್ದಾರೆ.

ಇದು ಅಧಿಕೃತ, ನಾವು ಗೆದ್ದಿದ್ದೇವೆ. ಶ್ರೀಮಂತರಿಗೆ ತೆರಿಗೆ ವಿಧಿಸಲು, ಸಮಸ್ಯೆಗಳನ್ನು  ಗುಣಪಡಿಸಲು, ಬಡವರಿಗೆ ಮನೆ ಮತ್ತು ಸಮಾಜವಾದಿ ನ್ಯೂಯಾರ್ಕ್ ನಿರ್ಮಿಸಲು ಅಲ್ಬನಿಗೆ ಹೋಗುತ್ತೇನೆ. ಆದರೆ, ನಾನೊಬ್ಬನೇ ಇದನ್ನು ಮಾಡಲು ಸಾಧ್ಯವಿಲ್ಲ. ಸಮಾಜವಾದವನ್ನು ಗೆಲ್ಲಲು, ನಮಗೆ ಬಹುಜಾತಿಯ ಕಾರ್ಮಿಕ ವರ್ಗದ ಬೃಹತ್ ಆಂದೋಲನ ಬೇಕಾಗುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಜೂನ್ ನಲ್ಲಿ ನಡೆದ ಡೆಮಾಕ್ರಟಿಕ್ ಪ್ರಾಥಮಿಕ ಚುನಾವಣೆಯಲ್ಲಿ ಹಾಲಿ ಸದಸ್ಯ ಅರಾವೆಲ್ಲಾ ಸಿಮೋಟಾಸ್ ಅವರನ್ನು ಸೋಲಿಸಿದ ನಂತರ 36 ನೇ ಅಸೆಂಬ್ಲಿ ಜಿಲ್ಲೆಯ ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಸಾರ್ವತ್ರಿಕ ಚುನಾವಣೆಯಲ್ಲಿ   29 ವರ್ಷದ ಮಮ್ದಾನಿ ಅವಿರೋಧವಾಗಿ ಸ್ಪರ್ಧಿಸಿದ್ದರು ಎಂದು ಪ್ಯಾಚ್. ಕಾಮ್ ವರದಿ ಮಾಡಿದೆ.

ಜೊಹ್ರಾನ್ ಇದ್ದ ಮೇಲೆ ಬದಲಾವಣೆ ಬರಲಿದ ಎಂದು ನಾಯರ್ ಟ್ವೀಟ್ ಮಾಡಿದ್ದಾರೆ.

SCROLL FOR NEXT