ವಿದೇಶ

ಶ್ವೇತ ಭವನದ ಕೀಲಿ ಕೈ ಅಮೆರಿಕದ ಯುವಜನತೆ ಕೈಲಿ! 

Srinivas Rao BV

ವಾಷಿಂಗ್ ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಹಾಗೂ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ಅಮೆರಿಕದ ಮುಂದಿನ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ. 

ಆದರೆ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರ ಮತಗಳು ನಿರ್ಣಾಯಕವಾಗಿರಲಿವೆ ಎಂಬುದಕ್ಕೆ ಉತ್ತರ ದೊರೆತಿದೆ.

ಅಮೆರಿಕದ ಯುವ ಮತದಾರರು ಯಾರಿಗೆ ಹೆಚ್ಚಿನ ಮತಗಳನ್ನು ಚಲಾವಣೆ ಮಾಡಲಿದ್ದಾರೋ ಅವರಿಗೆ ಅಧ್ಯಕ್ಷ ಗಾದಿ ಒಲಿಯಲಿದೆ.

ಸೆಂಟರ್ ಫಾರ್ ಇನ್ಫಾರ್ಮೇಷನ್ ಹಾಗೂ ರಿಸರ್ಚ್ ಆನ್ ಸಿವಿಲ್ ಲರ್ನಿಂಗ್ ನ ಮಾಹಿತಿಯ ಪ್ರಕಾರ ಈ ಬಾರಿ 18-29 ವಯಸ್ಸಿನ ಮಂದಿ ದಾಖಲೆಯ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಅಮೆರಿಕಾದಲ್ಲಿ ಕಂಡುಬಂದಿರುವ ಜನಾಂಗೀಯ ತಾರತಮ್ಯ ಹಾಗೂ ಪ್ಯಾಂಡಮಿಕ್ ಜನರನ್ನು ನಾಯಕನ ಆಯ್ಕೆಯೆಡೆಗೆ ಹೆಚ್ಚು ಗಮನ ಕೊಡುವಂತೆ ಮಾಡಿದೆ ಎಂದು ಸೆಂಟರ್ ಫಾರ್ ಇನ್ಫಾರ್ಮೇಷನ್ ಹಾಗೂ ರಿಸರ್ಚ್ ಆನ್ ಸಿವಿಲ್ ಲರ್ನಿಂಗ್ ನ ಅಧ್ಯಯನ ವರದಿ ತಿಳಿಸಿದೆ.

SCROLL FOR NEXT