ವಿದೇಶ

ಬಹರೇನ್ ಪ್ರಧಾನಿಯಾಗಿ ರಾಜಕುಮಾರ ಸಲ್ಮಾನ್ ನೇಮಕ

Lingaraj Badiger

ಮನಾಮಾ: ಬಹರೇನ್ ದೇಶವನ್ನು ಸುಮಾರು ಐದು ದಶಕಗಳ ಕಾಲ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದ್ದ ಷೇಕ್ ಖಲಿಫಾ ಬಿನ್ ಸಲ್ಮಾನ್ ಅಲ್ ಖಲಿಫಾ( 84) ಅವರು ಬುಧವಾರ ಅನಾರೋಗ್ಯದಿಂದಾಗಿ ನಿಧನರಾದರು. ಈಗ ಬಹರೇನ್ ಹೊಸ ಪ್ರಧಾನಿಯಾಗಿ ರಾಜಕುಮಾರ ಸಲ್ಮಾನ್ ಬಿನ್ ಅಲ್ ಖಲೀಫಾ ಅವರನ್ನು ನೇಮಕ ಮಾಡಲಾಗಿದೆ.

ಈ ಸಂಬಂಧ ಬಹರೇನ್ ರಾಜ ಹಮದ್ ಬಿನ್ ಖಲೀಫಾ ಆದೇಶ ಹೊರಡಿಸಿದ್ದಾರೆ. ಅಧಿಕೃತ ಗೆಜೆಟ್ ಪ್ರಕಟಗೊಂಡ ಕೂಡಲೇ ರಾಯಲ್ ಆದೇಶ ಜಾರಿಗೆ ಬರಲಿದೆ. ನಂತರ ಫ್ರಿನ್ಸ್ ಸಲ್ಮಾನ್ ಪ್ರಧಾನಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಪ್ರಿನ್ಸ್ ಸಲ್ಮಾನ್ ಪ್ರಸ್ತುತ ಡೆಪ್ಯೂಟಿ ಕಮಾಂಡರ್ ಆಗಿದ್ದು, ಈಗ ಬಹರೇನ್ ನೂತನ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ.

1970 ರಿಂದ ಬಹರೇನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಖಲೀಫಾ ಬಿನ್​ ಸಲ್ಮಾನ್​ ಅಲ್​ ಖಲೀಫಾ ಅವರು ವಿಶ್ವದಲ್ಲೇ ಅತಿ ಹೆಚ್ಚು ಕಾಲ ಪ್ರಧಾನಿಯಾಗಿದ್ದ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು.

SCROLL FOR NEXT