ವಿದೇಶ

ಜೊ ಬೈಡನ್ ಪತ್ನಿ ಜಿಲ್ಲ್ ಬೈಡನ್ ಅವರ ಯೋಜನಾ ನಿರ್ದೇಶಕಿಯಾಗಿ ಭಾರತೀಯ ಮೂಲದ ಮಾಲಾ ಅಡಿಗ ನೇಮಕ 

Sumana Upadhyaya

ವಾಷಿಂಗ್ಟನ್: ಅಮೆರಿಕದ ಚುನಾಯಿತ ಅಧ್ಯಕ್ಷ ಜೊ ಬೈಡನ್ ಭಾರತೀಯ ಮೂಲದ ಅಮೆರಿಕದ ಮಾಲಾ ಅಡಿಗ ಎಂಬುವವರನ್ನು ತಮ್ಮ ಪತ್ನಿ, ಅಮೆರಿಕದ ಫಸ್ಟ್ ಲೇಡಿ ಜಿಲ್ಲ್ ಬೈಡನ್ ಅವರ ಯೋಜನಾ ನಿರ್ದೇಶಕಿಯಾಗಿ ನೇಮಿಸಿಕೊಂಡಿದ್ದಾರೆ. 

ಈ ಹಿಂದೆ ಮಾಲಾ ಅಡಿಗ ಅವರು ಜಿಲ್ಲ್ ಬೈಡನ್ ಅವರ ಹಿರಿಯ ಸಲಹೆಗಾರ್ತಿಯಾಗಿದ್ದರು, ಅಲ್ಲದೆ ಬೈಡನ್-ಕಮಲಾ ಹ್ಯಾರಿಸ್ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹಿರಿಯ ಯೋಜನಾ ಸಲಹೆಗಾರ್ತಿಯಾಗಿ ಕೂಡ ಕೆಲಸ ಮಾಡಿದ್ದರು. ಈ ಹಿಂದೆ ಮಾಲಾ ಅಡಿಗ ಬೈಡನ್ ಫೌಂಡೇಶನ್ ನ ಉನ್ನತ ಶಿಕ್ಷಣ ಮತ್ತು ಮಿಲಿಟರಿ ಫ್ಯಾಮಿಲೀಸ್ ನ ನಿರ್ದೇಶಕಿ ಕೂಡ ಆಗಿದ್ದರು.

ಹಿಂದೆ ಬರಾಕ್ ಒಬಾಮಾ ಸರ್ಕಾರದಲ್ಲಿ ಮಾಲಾ ಅಡಿಗ ಅವರು ಬ್ಯೂರೊ ಆಫ್ ಎಜುಕೇಶನ್ ಮತ್ತು ಕಲ್ಚರಲ್ ಅಫ್ಫೈರ್ಸ್ ನ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಉಪ ಸಹಾಯಕ ಕಾರ್ಯದರ್ಶಿಯಾಗಿದ್ದರು. ಇಲ್ಲಿನೊಯಿಸ್ ಮೂಲದ ಮಾಲಾ ಅಡಿಗ ಗ್ರಿನ್ನ್ ವೆಲ್ ಕಾಲೇಜಿನಲ್ಲಿ ಪದವಿ ಗಳಿಸಿ ಮಿನ್ನೆಸೊಟಾ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ಯೂನಿವರ್ಸಿಟಿ ಆಫ್ ಚಿಕಾಗೊ ಲಾ ಸ್ಕೂಲ್ ನಲ್ಲಿ ಪದವಿ ಗಳಿಸಿ ವಕೀಲ ವೃತ್ತಿ ಮಾಡಿದ್ದಾರೆ. 2008ರಲ್ಲಿ ಬರಾಕ್ ಒಬಾಮಾ ಆಡಳಿತದಲ್ಲಿ ಅಸೋಸಿಯೇಟ್ ಅತೊರ್ನಿ ಜನರಲ್ ಗೆ ವಕೀಲೆಯಾಗಿದ್ದರು.

SCROLL FOR NEXT