ವಿದೇಶ

ಪಾಕಿಸ್ತಾನ ಹೈಕೋರ್ಟ್ ನಲ್ಲಿ ಕುಲಭೂಷನ್ ಜಾಧವ್ ಪರ ವಕೀಲರ ನೇಮಕ ಅರ್ಜಿ ವಿಚಾರಣೆಗೆ ದಿನಾಂಕ ಫಿಕ್ಸ್

Raghavendra Adiga

ಇಸ್ಲಾಮಾಬಾದ್: ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್‌ಸಿ) ಕುಲಭೂಷಣ್ ಜಾಧವ್ ಅವರ ಪರ ವಕೀಲರ ನೇಮಕಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 6 ರಂದು ನಿಗದಿಪಡಿಸಿದೆ ಎಂದು ARY ನ್ಯೂಸ್ ವರದಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಅತರ್ ಮಿನಲ್ಲಾ ನ್ಯಾಯಮೂರ್ತಿ ಅಮೀರ್ ಫಾರೂಕ್, ಮತ್ತು ನ್ಯಾಯಮೂರ್ತಿ ಮಿಯಾನ್ ಗುಲ್ ಹಸನ್ ಔರಂಗಜೇಬ್  ಅವರನ್ನೊಳಗೊಂಡ ಹೈಕೋರ್ಟ್‌ನ್ಯಾಯಪೀಠ ಈ ವಿಚಾರಣೆಯನ್ನು ನಡೆಸಲಿದೆ.

ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರರು ಈ ಹಿಂದೆ ಭಾರತೀಯ ವಕೀಲ ಅಥವಾ ಕ್ವೀನ್ಸ್ ಕೌನ್ಸಿಲ್ ಬೇಡಿಕೆಯನ್ನುತಿರಸ್ಕರಿಸಿದ ನಂತರ ಈ ಪ್ರಕಟಣೆ ಹೊರಬಂದಿದೆ.

ಸೆಪ್ಟೆಂಬರ್‌ನಲ್ಲಿ, ಜಾಧವ್ ಅವರನ್ನು ಪ್ರತಿನಿಧಿಸುವ ಸಲುವಾಗಿ  ವಕೀಲರನ್ನು ನೇಮಕ ಮಾಡಲು ಭಾರತಕ್ಕೆ ಮತ್ತೊಂದು ಅವಕಾಶವನ್ನು ನೀಡುವಂತೆ ಪಾಕಿಸ್ತಾನದ ಇಸ್ಲಾಮಾಬಾದ್ ಹೈಕೋರ್ಟ್ ಫೆಡರಲ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು ಮತ್ತು ವಿಚಾರಣೆಯನ್ನು ಒಂದು ತಿಂಗಳು ಮುಂಡೂಡಿತ್ತು ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಐಸಿಜೆ ತೀರ್ಪಿನ ಅನುಷ್ಠಾನಕ್ಕೆ ಪಾಕಿಸ್ತಾನವು ತನ್ನ ಜವಾಬ್ದಾರಿಗಳನ್ನು ಪೂರೈಸಲು ಸಾಧ್ಯವಾಗಿಲ್ಲ ಮತ್ತು ಎಲ್ಲಾ ದಾಖಲೆಗಳನ್ನು ಒದಗಿಸುವುದು ಮತ್ತು ಭಾರತದ ಕೌನ್ಸಲೇಟರ್ ಗಳಿಗೆ ನೇರ ಪ್ರವೇಶ ಸೇರಿದಂತೆ ತೆ ಪ್ರಮುಖ ಸಮಸ್ಯೆಗಳನ್ನು ಇನ್ನೂ ಬಗೆಹರಿಸಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾ ಜಾಧವ್ ಅವರ ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ವಕೀಲರ ಅಥವಾ ಕ್ವೀನ್ಸ್ ಕೌನ್ಸಿಲ್ ನ ನೇಮಕವನ್ನೂ ಪಾಕಿಸ್ತಾನ ಖಚಿತಪಡಿಸಿಲ್ಲ ಎಂದು ಅವರು ಹೇಳಿದರು.

SCROLL FOR NEXT