ವಿದೇಶ

'ಹೆಪಟೈಟಿಸ್ ಸಿ ವೈರಸ್' ಪತ್ತೆ ಮಾಡಿದ ಮೂವರು ಸಾಧಕರಿಗೆ ವೈದ್ಯಕೀಯ ನೊಬೆಲ್‌

Lingaraj Badiger

ಸ್ಟಾಕ್‌ಹೋಮ್‌: 2020ನೇ ಸಾಲಿನ ವೈದ್ಯಕೀಯ ನೊಬೆಲ್‌ ಪ್ರಶಸ್ತಿ ಘೋಷಣೆಯಾಗಿದ್ದು, 'ಹೆಪಟೈಟಿಸ್ ಸಿ ವೈರಸ್‌' ಆವಿಷ್ಕರಿಸಿದ ಮೂವರು ಸಾಧಕರಾದ ಹಾರ್ವೆ ಜೆ.ಆಲ್ಟರ್‌, ಮಿಷೆಲ್‌ ಹೌಟನ್‌ ಹಾಗೂ ಚಾರ್ಲ್ಸ್‌ ಎಂ.ರೈಸ್ ಅವರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನೊಬೆಲ್ ಸಮಿತಿಯ ಮುಖ್ಯಸ್ಥ ಥಾಮಸ್ ಪರ್ಲ್ಮನ್ ಅವರು ಸೋಮವಾರ ಸ್ಟಾಕ್ ಹೋಮ್ ನಲ್ಲಿ 2020ನೇ ಸಾಲಿನ ವೈದ್ಯಕೀಯ ಪ್ರಶಸ್ತಿಯ ವಿಜೇತರ ಹೆಸರನ್ನು ಘೋಷಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, ವಿಶ್ವಾದ್ಯಂತ 70 ದಶಲಕ್ಷಕ್ಕೂ ಹೆಚ್ಚು ಹೆಪಟೈಟಿಸ್ ಪ್ರಕರಣಗಳು ವರದಿಯಾಗುತ್ತಿದ್ದು, ಪ್ರತಿ ವರ್ಷ 400,000 ಮಂದಿ ಸಾವನ್ನಪ್ಪುತ್ತಿದ್ದಾರೆ.

ಇದು ದೀರ್ಘಕಾಲದ ರೋಗವಾಗಿದ್ದು, ಯಕೃತ್ತಿನ ಉರಿಯೂತ ಮತ್ತು ಕ್ಯಾನ್ಸರ್ ಗೆ ಪ್ರಮುಖ ಕಾರಣವಾಗಿದೆ.

SCROLL FOR NEXT