ವಿದೇಶ

ವಿಶ್ವ ಆಹಾರ ಕಾರ್ಯಕ್ರಮಕ್ಕೆ ನೊಬೆಲ್ ಶಾಂತಿ ಪುರಸ್ಕಾರ

Nagaraja AB

ನಾರ್ವೆ: ಹಸಿವನ್ನು ನೀಗಿಸಲು ಪ್ರಯತ್ನಿಸುತ್ತಿರುವ ವಿಶ್ವ ಆಹಾರ ಕಾರ್ಯಕ್ರಮಕ್ಕೆ 2020ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ ನೀಡಲು ನಾರ್ವೆಯ ನೊಬೆಲ್ ಸಮಿತಿ ನಿರ್ಧರಿಸಿದೆ.

ಆಲ್ಫ್ರೆಡ್ ನೊಬೆಲ್ ಅವರ ಇಚ್ಚೆಯಂತೆ ಉಲ್ಲೇಖಿಸಲಾದ ರಾಷ್ಟ್ರಗಳ ಭ್ರಾತೃತ್ವವನ್ನು ಬೆಳೆಸಲು ವಿಶ್ವ ಆಹಾರ ಕಾರ್ಯಕ್ರಮವು ಪ್ರತಿದಿನ ಕೊಡುಗೆ ನೀಡುತ್ತಿದೆ.

ವಿಶ್ವ ಆಹಾರ ಕಾರ್ಯಕ್ರಮ ವಿಶ್ವದ ಅತಿದೊಡ್ಡ ಮಾನವೀಯ ಸಂಘಟನೆಯಾಗಿದ್ದು, ಹಸಿವಿಗೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿ ಆಹಾರ ಸುರಕ್ಷತೆಯನ್ನು ಉತ್ತೇಜಿಸುತ್ತಿದೆ.

ಆಹಾರ ಸುರಕ್ಷತೆಯನ್ನು ಶಾಂತಿಯ ಸಾಧನವನ್ನಾಗಿ ಮಾಡುವಲ್ಲಿ ಬಹುಪಕ್ಷೀಯ ಸಹಕಾರದಲ್ಲಿ ವಿಶ್ವ ಆಹಾರ ಕಾರ್ಯಕ್ರಮ ಪ್ರಮುಖವಾದ ಪಾತ್ರ ವಹಿಸುತ್ತಿದೆ ಮತ್ತು ಯುದ್ಧ ಮತ್ತು ಸಂಘರ್ಷದ ಆಯುಧವಾಗಿ ಹಸಿವಿನ ಬಳಕೆಯನ್ನು  ಎದುರಿಸಲು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳನ್ನು ಸಜ್ಜುಗೊಳಿಸಲು ಬಲವಾದ ಕೊಡುಗೆ ನೀಡುತ್ತಿದೆ.

SCROLL FOR NEXT