ವಿದೇಶ

ಬರುವ ವರ್ಷದ ಆದಿ ಭಾಗದಲ್ಲಿ ಕೋವಿಡ್ ಲಸಿಕೆ: ಡಾ. ಸೌಮ್ಯ ಸ್ವಾಮಿನಾಥನ್

Nagaraja AB

ನ್ಯೂಯಾರ್ಕ್: ಡಿಸೆಂಬರ್ ಅಂತ್ಯ ಇಲ್ಲವೆ ಮುಂದಿನ 2021ರ ಆದು ಭಾಗದಲ್ಲಿ ಬಹು ನಿರೀಕ್ಷಿತ ಕೋವಿಡ್ 19 ಸೋಂಕಿಗೆ ಲಸಿಕೆ ದೊರೆಯುವ ನಿರೀಕ್ಷೆ ಇದೆ ಎಂದು ವಿಶ್ವ ಆರೋಗ್ಯ ಸಂಘಟನೆಯ ಮುಖ್ಯ ವಿಜ್ಞಾನಿ ಹಾಗೂ ಭಾರತೀಯ ಮೂಲದ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಕೋವಿಡ್ ಲಸಿಕೆ ಕುರಿತ ಬೆಳವಣಿಗೆಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವಿಶ್ವದಾದ್ಯಂತ ವಿವಿಧ ಬಗೆಯ 40 ಲಸಿಕೆಗಳ ಕ್ಲಿನಿಕಲ್ ಪರೀಕ್ಷೆ ವಿವಿಧ ಹಂತಗಳಲ್ಲಿದ್ದು, ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ ಎಂದು ಹೇಳಿದರು.

ಈ ಪೈಕಿ 10 ಲಸಿಕೆಗಳ ಪರೀಕ್ಷೆ ಮೂರನೇ ಹಂತದಲ್ಲಿ ನಡೆಯುತ್ತಿದೆ. ಮೂರನೇ ಹಂತದ ಬಳಿಕ ಲಸಿಕೆಗಳ ಸಾಮರ್ಥ್ಯ ಮತ್ತು ಸುರಕ್ಷತೆಯನ್ನು ಪರಿಗಣಿಸಿ ಮಾನವ ಬಳಕೆಗೆ ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.

SCROLL FOR NEXT