ಕಮಲ್ ಹ್ಯಾರಿಸ್ 
ವಿದೇಶ

ಕಮಲಾ ಹ್ಯಾರಿಸ್ ರನ್ನು ‘ದುರ್ಗಾಮಾತೆ‘ಯಾಗಿ ಚಿತ್ರಿಸಿದ್ದಕ್ಕೆ ಆಕ್ಷೇಪ: ಕ್ಷಮೆ ಕೋರುವಂತೆ ಹಿಂದೂಗಳ ಆಗ್ರಹ

ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ‘ದುರ್ಗಾಮಾತೆ‘ಯಾಗಿ ಚಿತ್ರಿಸಿ ಅದನ್ನು ಟ್ವೀಟ್‌ ಮಾಡಿದ ಕಮಲಾ ಅವರ ಸೋದರ ಸೊಸೆ ಮೀನಾ ಹ್ಯಾರಿಸ್ ಅವರು ಕ್ಷಮೆಯಾಚಿಸಬೇಕು ಎಂದು ಅಮೆರಿಕದಲ್ಲಿರುವ ಹಿಂದೂಗಳು ಆಗ್ರಹಿಸಿದ್ದಾರೆ.

ವಾಷಿಂಗ್ಟನ್‌: ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ‘ದುರ್ಗಾಮಾತೆ‘ಯಾಗಿ ಚಿತ್ರಿಸಿ ಅದನ್ನು ಟ್ವೀಟ್‌ ಮಾಡಿದ ಕಮಲಾ ಅವರ ಸೋದರ ಸೊಸೆ ಮೀನಾ ಹ್ಯಾರಿಸ್ ಅವರು ಕ್ಷಮೆಯಾಚಿಸಬೇಕು ಎಂದು ಅಮೆರಿಕದಲ್ಲಿರುವ ಹಿಂದೂಗಳು ಆಗ್ರಹಿಸಿದ್ದಾರೆ.

ವಿವಾದ ಸೃಷ್ಟಿಯಾಗುತ್ತಿದ್ದಂತೆ ಮೀನಾ ಹ್ಯಾರಿಸ್ ಅವರು ತಾವು ಟ್ವೀಟ್‌ ಮಾಡಿದ್ದ ಚಿತ್ರವನ್ನು ತಕ್ಷಣ ತೆಗೆದು ಹಾಕಿದ್ದಾರೆ. ಅಮೆರಿಕದಲ್ಲಿ ವಕೀಲೆಯಾಗಿರುವ ಮೀನಾ ಅವರು, ಮಕ್ಕಳ ಪುಸ್ತಕದ ಲೇಖಕಿಯೂ ಹೌದು. ಜತೆಗೆ, ಫೆನೊಮಿನಲ್ ವುಮೆನ್ ಆಕ್ಷನ್ ಆಂದೋಲನದ ಸಂಸ್ಥಾಪಕಿ.

ಮೀನಾ ಅವರ ಟ್ವೀಟ್ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಹಿಂದೂ ಅಮೆರಿಕನ್‌ ಫೌಂಡೇಷನ್‌ನ ಸುಹಾಗ್ ಎ ಶುಕ್ಲಾ, ‘ನೀವು ದೇವಿ ದುರ್ಗಾಮಾತೆಯ ವ್ಯಂಗ್ಯಚಿತ್ರವನ್ನು ಟ್ವೀಟ್ ಮಾಡಿದ್ದೀರಿ. ದೇವಿಯ ಮುಖವನ್ನು ತಿರುಚಿದಂತೆ ಚಿತ್ರಿಸುವ ಮೂಲಕ, ವಿಶ್ವದ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದೀರಿ‘ ಎಂದು ಟ್ವೀಟ್ ಮಾಡಿದ್ದಾರೆ.

ಅಮೆರಿಕದಲ್ಲಿರುವ ಹಿಂದೂ ಸಮುದಾಯವನ್ನು ಪ್ರತಿನಿಧಿಸುವ ಈ ಫೌಂಡೇಷನ್‌, ಧರ್ಮಕ್ಕೆ ಸಂಬಂಧಿಸಿದ ಚಿತ್ರಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವಾಗ ಅನುಸರಿಸುವ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಹಿಂದೂ ಅಮೆರಿಕನ್ ಪೊಲಿಟಿಕಲ್ ಆಕ್ಷನ್ ಕಮಿಟಿಯ ರಿಷಿ ಭೂತಾಡಾ, ‘ಈ ಅವಮಾನಕರ ಚಿತ್ರವನ್ನು ಮೀನಾ ಹ್ಯಾರಿಸ್ ರಚಿಸಿಲ್ಲ. ಅವರು ಈ ಚಿತ್ರವನ್ನು ಟ್ವೀಟ್ ಮಾಡುವ ಮುನ್ನವೇ ಅದು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿತ್ತು. ಈ ಚಿತ್ರವನ್ನು ನಮ್ಮ ತಂಡ ಸೃಷ್ಟಿಸಿಲ್ಲ ಎಂದು ಈಗಾಗಲೇ ಜೊ ಬೈಡನ್ ಪ್ರಚಾರ ತಂಡ ಖಚಿತಪಡಿಸಿದೆ‘ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT