ವಿದೇಶ

ಪಾಕಿಸ್ತಾನದ ಪೇಶಾವರದಲ್ಲಿ ಮಸೀದಿ ಪಕ್ಕ ಬಾಂಬ್ ಸ್ಫೋಟ: ಕನಿಷ್ಠ 7 ಸಾವು, 70 ಮಂದಿಗೆ ಗಾಯ

Sumana Upadhyaya

ಪೇಶಾವರ್: ವಾಯುವ್ಯ ಪಾಕಿಸ್ತಾನ ನಗರ ಪೇಶಾವರದ ಹೊರವಲಯದಲ್ಲಿ ಮಂಗಳವಾರ ಬೆಳಗಿನ ಜಾವ ಪ್ರಬಲ ಬಾಂಬ್ ಸ್ಫೋಟವಾಗಿದ್ದು ಕನಿಷ್ಠ ಏಳು ಮಕ್ಕಳು ಮೃತಪಟ್ಟು 70 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹಾಗೂ ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.

ಜಮಿಯಾ ಝುಬೈರಿಯಾ ಮದ್ರಸಾದಲ್ಲಿ ಇಸ್ಲಾಂ ಬಗ್ಗೆ ಪಾದ್ರಿಯೊಬ್ಬರು ಮಕ್ಕಳಿಗೆ ಉಪನ್ಯಾಸ ನೀಡುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡಿದೆ ಎಂದು ಪೊಲೀಸ್ ಅಧಿಕಾರಿ ವಖರ್ ಅಜಿಮ್ ಹೇಳಿದ್ದು, ಯಾರೋ ಮದ್ರಸಾದಲ್ಲಿ ಬ್ಯಾಗ್ ನ್ನು ಬಿಟ್ಟು ಹೋದ ಸ್ವಲ್ಪ ಹೊತ್ತಿನಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ ಎಂದರು.

ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಆಸ್ಪತ್ರೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಖೈಬರ್ ಪಕ್ತುಂಖ್ವಾ ಪ್ರಾಂತ್ಯದ ರಾಜಧಾನಿ ಪೇಶಾವರ ಆಗಿದ್ದು, ಇಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ಉಗ್ರರ ದಾಳಿಗಳು ನಡೆಯುತ್ತಿವೆ, ಆದರೆ ಪಂಥೀಯ ಹಿಂಸಾಚಾರವು ಪಾಕಿಸ್ತಾನದಾದ್ಯಂತ ಮಸೀದಿಗಳು ಅಥವಾ ಸೆಮಿನರಿಗಳಲ್ಲಿ ಜನರನ್ನು ಕೊಂದು, ಗಾಯಗೊಳಿಸಿವೆ.

ಖ್ವೆಟ್ಟಾದ ನೈರುತ್ಯ ಸಿಟಿಯಲ್ಲಿ ಬಾಂಬ್ ದಾಳಿ ನಡೆದು ಮೂವರು ಮೃತಪಟ್ಟ ನಂತರ ಈ ದಾಳಿ ನಡೆದಿದೆ.

SCROLL FOR NEXT