ವಿದೇಶ

ಭಾರತಕ್ಕೆ ಸೌದಿ ಅರೇಬಿಯಾದಿಂದ ದೀಪಾವಳಿ ಉಡುಗೊರೆ

Srinivas Rao BV

ನವದೆಹಲಿ: ಭಾರತಕ್ಕೆ ಸೌದಿ ಅರೇಬಿಯಾ ಗಿಫ್ಟ್ ನೀಡಿದ್ದು, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಹಾಗೂ ಗಿಲ್ಗಿಟ್ ಬಾಲ್ಟಿಸ್ಥಾನವನ್ನು ಪಾಕಿಸ್ತಾನದ ನಕಾಶೆಯಿಂದ ತೆಗೆದುಹಾಕಿದೆ. 

ಮಾಧ್ಯಮಗಳ ವರದಿಯ ಪ್ರಕಾರ ಸೌದಿ ಅರೇಬಿಯಾ ನವೆಂಬರ್ 21-22 ರಂದು ಆಯೋಜಿಸಿದ್ದ ಜಿ-20 ಶೃಂಗಸಭೆಯ ಸಮಾರಂಭದ ಆಚರಣೆಯ ಭಾಗವಾಗಿ 20 ರಿಯಾಲ್ ಬ್ಯಾಂಕ್ ನೋಟ್ ನ್ನು ಬಿಡುಗಡೆ ಮಾಡಿದೆ. ಬ್ಯಾಂಕ್ ನೋಟ್ ನಲ್ಲಿ ಚಿತ್ರೀಕರಿಸಲಾಗಿರುವ ವಿಶ್ವನಕಾಶೆಯಲ್ಲಿ ಗಿಲ್ಗಿಟ್ ಬಾಲ್ಟಿಸ್ಥಾನ ಹಾಗೂ ಕಾಶ್ಮೀರದ ಕೆಲವು ಭಾಗಗಳನ್ನು ಪಾಕಿಸ್ತಾನದ ನಕಾಶೆಯಿಂದ ತೆಗೆದು ಹಾಕಿದೆ.

ಸೌದಿ ಅರೇಬಿಯಾದ ಈ ನಡೆ, ತನ್ನ ಹೊಸ ರಾಜಕೀಯ ನಕ್ಷೆಯನ್ನು ತಯಾರಿಸಿರುವ ಪಾಕಿಸ್ತಾನಕ್ಕೆ ಉಂಟಾಗಿರುವ ಭಾರಿ ಮುಖಭಂಗ ಎಂದೇ ವಿಶ್ಲೇಷಿಸಲಾಗುತ್ತಿದೆ.

ಈ ಬೆಳವಣಿಗೆಯನ್ನು ಖಚಿತಪಡಿಸಿರುವ ಪಾಕ್ ಆಕ್ರಮಿತ ಕಾಶ್ಮೀರದ ಕಾರ್ಯಕರ್ತ ಅಜ್ಮದ್ ಅಯೂಬ್ ಮಿರ್ಜಾ ಟ್ವೀಟ್ ಮಾಡಿದ್ದು, ಸೌದಿ ಅರೇಬಿಯಾ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಗಿಲ್ಗಿಟ್ ಬಾಲ್ಟೀಸ್ಥಾನವನ್ನು ಪಾಕಿಸ್ತಾನದ ನಕ್ಷೆಯಿಂದ ತೆಗೆದುಹಾಕಿದೆ ಎಂದು ಹೇಳಿದ್ದಾರೆ. ಇದರ ಚಿತ್ರವನ್ನೂ ಟ್ವೀಟ್ ನಲ್ಲಿ ಪೋಸ್ಟ್ ಮಾಡಿರುವ ಅಜ್ಮದ್ ಅಯೂಬ್ ಮಿರ್ಜಾ, ಇದನ್ನು ಭಾರತಕ್ಕೆ ಸೌದಿ ಅರೇಬಿಯಾದ ಉಡುಗೊರೆಯೆಂದು ಹೇಳಿದ್ದಾರೆ.

SCROLL FOR NEXT