ವಿದೇಶ

ಇಸ್ಲಾಮಿಕ್ ಭಯೋತ್ಪಾದನೆಯನ್ನು ಸಮರ್ಥಿಸಿಕೊಂಡ ಮಲೇಷ್ಯಾ ಮಾಜಿ ಪ್ರಧಾನಿ

Srinivas Rao BV

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಮಲೇಷ್ಯಾ ಮಾಜಿ ಪ್ರಧಾನಿ ಮಹಥಿರ್ ಮೊಹಮ್ಮದ್ ಮುಸ್ಲಿಮರಿಗೆ ಕೋಪಗೊಳ್ಳಲು ಹಾಗೂ ಲಕ್ಷಾಂತರ ಪ್ರಂಚರನ್ನು ಹತ್ಯೆಯ ಮಾಡಲು ಅಧಿಕಾರವಿದೆ ಎಂದು ಇಸ್ಲಾಮಿಕ್ ಭಯೋತ್ಪಾದನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಫ್ರಾನ್ಸ್ ನಲ್ಲಿ ಭಯೋತ್ಪಾದಕ ಪ್ರೆಂಚ್ ನ ವ್ಯಕ್ತಿಯೊಬ್ಬನನ್ನು ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ತಲೆ ಕತ್ತರಿಸಿದ ಎರಡನೇ ಘಟನೆ ವರದಿಯಾಗಿದ್ದು, ಮಹಥಿರ್ ಸರಣಿ ಟ್ವೀಟ್ ಮಾಡಿದ್ದು, ಪ್ರಾಫೆಟ್ ಮೊಹಮ್ಮದ್ ರ ವ್ಯಂಗ್ಯಚಿತ್ರಗಳನ್ನು ಚಾರ್ಲಿ ಹೆಬ್ಡೋ ವಿರುದ್ಧದ ಆಕ್ರೋಶವನ್ನು ಹೊರಹಾಕುವುದಕ್ಕೆ ಮುಸ್ಲಿಮರಿಗೆ ಅಧಿಕಾರವಿದೆ ಎಂದು ಮಹಥಿರ್ ಹೇಳಿದ್ದಾರೆ. 

ಪ್ರಾನ್ಸ್ ನಲ್ಲಿ ಪ್ರಾಫೆಟ್ ಮೊಹಮ್ಮದ್ ರ ವ್ಯಂಗ್ಯ ಚಿತ್ರ ತೋರಿಸಿದ್ದ ಟೀಚರ್ ನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ಆರೋಪಿ ವ್ಯಕ್ತಿ ಟೀಚರ್ ನ ನಡೆಯಿಂದ ತೀವ್ರ ಆಕ್ರೋಶಗೊಂಡಿದ್ದ. ಕೊಲೆಯಾದ ಟೀಚರ್ ನ ನಡೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಸಮರ್ಥಿಸಲಾಗುತ್ತಿದೆ. ಆದರೆ ಕೊಲೆಯನ್ನು ನಾನು ಓರ್ವ ಮುಸ್ಲಿಮ್ ಆಗಿ ಸಮರ್ಥಿಸುವುದಿಲ್ಲ. ಆದರೆ ನಾನು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಂಬಿದರೆ, ಜನರಿಗೆ ಸುಖಾಸುಮ್ಮನೆ ನೋವು ಉಂಟು ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಭಾವಿಸಲು ಸಾಧ್ಯವಿಲ್ಲ ಎಂದು ಮಹಥಿರ್ ಟ್ವೀಟ್ ನಲ್ಲಿ ಹೇಳಿದ್ದಾರೆ.

ಪ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮಾಕ್ರಾನ್ ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಹೋರಾಡುತ್ತೇವೆ ಎಂದು ಹೇಳಿದ್ದರ ಬಗ್ಗೆ ಟ್ವೀಟ್ ಮಾಡಿರುವ ಮಹಥಿರ್, ಮಾಕ್ರಾನ್ ನಾಗರಿಕ ವರ್ತನೆಯನ್ನು ತೋರುತ್ತಿಲ್ಲ. ಕೊಲ್ಲುವುದನ್ನು ಇಸ್ಲಾಮ್ ನಲ್ಲಿ ಹೇಳಿಲ್ಲ. ಆದರೆ ಧರ್ಮಾತೀತವಾಗಿ ಕೋಪಗೊಂಡ ಎಲ್ಲರೂ ಕೊಲೆ ಮಾಡುತ್ತಾರೆ, ಲಕ್ಷಾಂತರ ಜನರನ್ನು ಹತ್ಯೆ ಮಾಡಿದ ಇತಿಹಾಸ ಫ್ರಾನ್ಸ್ ಗೆ ಇದೆ, ಈ ಪೈಕಿ ಅನೇಕ ಮುಸ್ಲಿಮರೂ ಇದ್ದರು. ಪ್ರೆಂಚರ ವಿರುದ್ಧ ಕೋಪ ಮಾಡಿಕೊಳ್ಳಲು, ಅವರನ್ನು ಹತ್ಯೆ ಮಾಡಲು ಮುಸ್ಲಿಮರಿಗೆ ಅಧಿಕಾರವಿದೆ ಎಂದು ಮಹಥಿರ್ ಹೇಳಿದ್ದಾರೆ.

SCROLL FOR NEXT