ಉದ್ಧಟತನ: ಭಾರತಕ್ಕೆ ಎಚ್ಚರಿಕೆ, ಬಾಲಾಕೋಟ್ ಪ್ರತಿದಾಳಿಯನ್ನು ನೆನಪಿಸಿದ ಪಾಕ್ ಸೇನಾ ಮುಖ್ಯಸ್ಥ! 
ವಿದೇಶ

ಉದ್ಧಟತನ: ಭಾರತಕ್ಕೆ ಎಚ್ಚರಿಕೆ, ಬಾಲಾಕೋಟ್ ಪ್ರತಿದಾಳಿಯನ್ನು ನೆನಪಿಸಿದ ಪಾಕ್ ಸೇನಾ ಮುಖ್ಯಸ್ಥ!

ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಾಮರ್ ಜಾವೇದ್ ಬಾಜ್ವಾ ಭಾರತದೆಡೆಗೆ ಉದ್ಧಟತನ ಪ್ರದರ್ಶಿಸಿದ್ದು, ಭಾರತಕ್ಕೇ ಎಚ್ಚರಿಕೆ ನೀಡುವ ದುಸ್ಸಾಹಸ ಮಾಡಿದ್ದಾರೆ. 

ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಾಮರ್ ಜಾವೇದ್ ಬಾಜ್ವಾ ಭಾರತದೆಡೆಗೆ ಉದ್ಧಟತನ ಪ್ರದರ್ಶಿಸಿದ್ದು, ಭಾರತಕ್ಕೇ ಎಚ್ಚರಿಕೆ ನೀಡುವ ದುಸ್ಸಾಹಸ ಮಾಡಿದ್ದಾರೆ. 

ಪಾಕಿಸ್ತಾನದ ರಕ್ಷಣಾ ದಿನಾಚರಣೆ ಹಾಗೂ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿರುವ ಬಾಜ್ವಾ, ಭಾರತದ ವಿರುದ್ಧ 5th ಜನರೇಷನ್ ಯುದ್ಧ ಅಥವಾ ಹೈಬ್ರೀಡ್ ಯುದ್ಧವನ್ನು ಗೆಲ್ಲುವ ಮಾತನಾಡಿದ್ದಾರೆ. 

"ಪಾಕಿಸ್ತಾನ ಹಾಗೂ ಅದರ ಸೇನೆಗೆ ಅಪಖ್ಯಾತಿ ತರುವ ಉದ್ದೇಶದಿಂದ ನಡೆಯುತ್ತಿರುವ ಕೃತ್ಯಗಳಿಂದ ಪಾಕ್ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅಷ್ಟೇ ಅಲ್ಲದೇ 5 ನೇ ಪೀಳಿಗೆ ಅಥವಾ ಹೈಬ್ರಿಡ್ ವಾರ್ ಸ್ವರೂಪದಲ್ಲಿ ನಮಗೆ ಸವಾಲುಗಳನ್ನು ಹಾಕಲಾಗುತ್ತಿದೆ. ಇದರ ಅಪಾಯವನ್ನು ನಾವು ಬಲ್ಲೆವು, ಆದರೆ ಈ ಯುದ್ಧದಲ್ಲಿ ದೇಶದ ಜನತೆಯ ಸಹಕಾರದಿಂದ ನಾವೇ ಗೆಲ್ಲಲಿದ್ದೇವೆ" ಎಂದು ಪಾಕ್ ಸೇನಾ ಮುಖ್ಯಸ್ಥ ಬಾಜ್ವಾ ತಿಳಿಸಿದ್ದಾರೆ.

ಇದೇ ವೇಳೆ ಭಾರತದ ವಿರುದ್ಧವೂ ಸುಖಾಸುಮ್ಮನೆ ವಾಗ್ದಾಳಿ ನಡೆಸಿರುವ ಬಾಜ್ವಾ, ಪಾಕಿಸ್ತಾನ ಶಾಂತಿಯನ್ನು ಬಯಸುತ್ತದೆ. ಒಂದು ವೇಳೆ ಯುದ್ಧದ ಪರಿಸ್ಥಿತಿ ನಿರ್ಮಾಣವಾದರೆ ಪಾಕಿಸ್ತಾನ ಅದಕ್ಕೆ ತಕ್ಕ ಉತ್ತರ ನೀಡುತ್ತದೆ. 1965 ರಲ್ಲಿ ಪಾಕ್ ಭಾರತವನ್ನು ಯುದ್ಧದಲ್ಲಿ ಸೋಲಿಸಿತ್ತು. 2019 ರಲ್ಲಿ ವಿಫಲಗೊಂಡ ಬಾಲಾಕೋಟ್ ವೈಮಾನಿಕ ಸರ್ಜಿಕಲ್ ಸ್ಟ್ರೈಕ್ ಗೆ ತಕ್ಕ ಪ್ರತ್ಯುತ್ತರ ನೀಡಿತ್ತು, ಭಾರತ ನಮ್ಮ ಯುದ್ಧ ಸನ್ನದ್ಧತೆಯನ್ನು ಶಂಕಿಸುವುದು ಬೇಡ ಎಂದು ಬಾಜ್ವಾ ಎಚ್ಚರಿಕೆ ನೀಡುವ ಧ್ವನಿಯಲ್ಲಿ ಮಾತನಾಡಿದ್ದಾರೆ.

ಇದೇ ವೇಳೆ ಭಾರತ ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ವಿಧಿಯನ್ನು ರದ್ದುಗೊಳಿಸಿರುವುದನ್ನೂ ವಿರೋಧಿಸಿದ್ದು, ಭಾರತ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಪ್ರಾದೇಶಿಕ ಶಾಂತಿಯನ್ನು ಕದಡಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT