ವಿದೇಶ

ಎಲ್ಎಸಿಯಲ್ಲಿ ಭಾರತದ ಯಶಸ್ವಿ ಸೇನಾ ಚಟುವಟಿಕೆ; ಪಿಎಲ್ಎ ವೈಫಲ್ಯಕ್ಕೆ ಕ್ಸೀ ಕೆಂಡಾಮಂಡಲ

Srinivas Rao BV

ಎಲ್ಎಸಿಯಾದ್ಯಂತ ಭಾರತೀಯ ಸೇನೆ ನಡೆಸಿದ ಯಶಸ್ವೀ ಚಟುವಟಿಕೆಗೆ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಕೆಂಡಾಮಂಡಲರಾಗಿದ್ದಾರೆ. 

ಆ.29-30 ರ ಮಧ್ಯರಾತ್ರಿ ಪಾಂಗೊಂಗ್‌ ಸೋ ಸರೋವರದ ಸಂಪೂರ್ಣ ದಕ್ಷಿಣ ಭಾಗ ಮತ್ತು ಸ್ಪ್ಯಾಂಗೂರ್‌ ಗ್ಯಾಪ್‌ ನ ಪ್ರದೇಶದಲ್ಲಿರುವ ಗುಡ್ಡಗಳನ್ನು ಚೀನಾ ಸೈನಿಕರಿಗಿಂತ ಮೊದಲೇ ತೆರಳಿ ಭಾರತೀಯ ಸೈನಿಕರು ವಶಕ್ಕೆ ಪಡೆದಿದ್ದರು. ಪೀಪಲ್ಸ್ ಲಿಬರೇಷನ್ ಆರ್ಮಿಯ ವೈಫಲ್ಯಕ್ಕೆ ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ಬಾರಿಯೂ ಚೀನಾ ಭಾರತದ ಮೇಲೆ ಪ್ರಹಾರ ಮಾಡುತ್ತಿತ್ತು, ಆದರೆ ಈ ಬಾರಿ ಚೀನಾದ ಮೇಲೆ ಭಾರತವೇ ಪ್ರಹಾರ ನಡೆಸಿದ್ದು, ಚೀನಾಗೆ ಭರಿಸಲಾಗದ ಆಘಾತವಾಗಿದೆ.

ಭಾರತ ಮರಳಿ ತನ್ನ ಭೂಮಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಸಿಸಿಪಿಯ ಸ್ಥಳೀಯ ನಾಯಕತ್ವ ಘರ್ಷಣೆಗಳನ್ನು ತಪ್ಪಿಸುವುದಕ್ಕಾಗಿ ತಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದರು. ಇದು ಕ್ಸೀ ಜಿನ್ ಪಿಂಗ್ ಅವರನ್ನು ಕೆರಳಿಸಿದೆ.

SCROLL FOR NEXT