ವಿದೇಶ

ಶಾರ್ಜಾದಲ್ಲಿ ಭಾರತೀಯ ಮಹಿಳೆ ಆತ್ಮಹತ್ಯೆ 

Srinivas Rao BV

ಶಾರ್ಜಾ: 26 ವರ್ಷದ ಭಾರತೀಯ ಮೂಲದ ಮಹಿಳೆಯೊಬ್ಬರು ಶಾರ್ಜಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಭಾವನಾ ರಾಮ್ ಮೃತ ಮಹಿಳೆ. ಅಲ್ ಮಝಾ ಪ್ರದೇಶದ ಅಪಾರ್ಟ್ಮೆಂಟ್ ನ 16 ನೇ ಅಂತಸ್ತಿನಿಂದ ಜಿಗಿದು ಈ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಪ್ರಾರಂಭಿಕ ವರದಿಗಳ ಪ್ರಕಾರ ಇದು  ಆತ್ಮಹತ್ಯೆ ಇರಬಹುದು ಎಂದು ಅಧಿಕಾರಿಗಳು ಖಲೀಜ್ ಟೈಮ್ಸ್ ಗೆ ಹೇಳಿಕೆ ನೀಡಿದ್ದಾರೆ. ಭಾವನ ವಿವಾಹಿತ ಮಹಿಳೆಯಾಗಿದ್ದು, ಒಂದು ಮಗು ಇತ್ತು. ಆತ್ಮಹತ್ಯೆ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 

SCROLL FOR NEXT