ಪ್ರತ್ಯಕ್ಷ ದೃಶ್ಯ 
ವಿದೇಶ

3ನೇ ಮಹಾಯುದ್ಧದ ಮುನ್ಸೂಚನೆಯೋ?: ಅಜರ್ ಬೈಜಾನ್ ನ 2 ಹೆಲಿಕಾಪ್ಟರ್, 3 ಡ್ರೋನ್ ಹೊಡೆದುರುಳಿಸಿದ ಅರ್ಮೇನಿಯ ಸೇನೆ, ವಿಡಿಯೋ!

ನಾಗೋರ್ನೊ-ಕಾರ್ಬಖ್ ಪ್ರದೇಶದಲ್ಲಿ ಅಜರ್ ಬೈಜಾನ್ ಗೆ ಸೇರಿದ ಎರಡು ಹೆಲಿಕಾಪ್ಟರ್‌ಗಳು ಮತ್ತು ಮೂರು ಡ್ರೋನ್‌ಗಳನ್ನು ನಾಶಪಡಿಸಿರುವುದಾಗಿ ಅರ್ಮೇನಿಯ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.

ಯೆರೆವಾನ್: ನಾಗೋರ್ನೊ-ಕಾರ್ಬಖ್ ಪ್ರದೇಶದಲ್ಲಿ ಅಜರ್ ಬೈಜಾನ್ ಗೆ ಸೇರಿದ ಎರಡು ಹೆಲಿಕಾಪ್ಟರ್‌ಗಳು ಮತ್ತು ಮೂರು ಡ್ರೋನ್‌ಗಳನ್ನು ನಾಶಪಡಿಸಿರುವುದಾಗಿ ಅರ್ಮೇನಿಯ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.

ವಿವಾದಾತ್ಮಕ ಪ್ರದೇಶದಲ್ಲಿನ ನಾಗರಿಕರ ವಸಾಹತುಗಳ ಮೇಲೆ ಅಜರ್ ಬೈಜಾನ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಎಂದು ಸಚಿವಾಲಯ ತಿಳಿಸಿದೆ.

ಸದ್ಯ, ಈ ಪ್ರದೇಶದಲ್ಲಿ ಪ್ರತಿದಾಳಿ ನಡೆಸುತ್ತಿರುವುದಾಗಿ ಅಜರ್ ಬೈಜಾನ್ ರಕ್ಷಣಾ ಸಚಿವಾಲಯ ಭಾನುವಾರ ಹೇಳಿದೆ.

ಅರ್ಮೇನಿಯ ಮತ್ತು ಅಜರ್ ಬೈಜಾನ್ ಎರಡು ರಾಷ್ಟ್ರಗಳು ಹಿಂದೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದವು. ಸೋವಿಯತ್ ಹೊಡೆದು ಚೂರಾದ ನಂತರ ಈ ಎರಡು ರಾಷ್ಟ್ರಗಳು ಹೊಸ ದೇಶಗಳಾಗಿ ಉದಯವಾಗಿದ್ದವು. ಅಂದಿನಿಂದ ಇಂದಿನವರೆಗೂ ಈ ಎರಡು ರಾಷ್ಟ್ರಗಳ ನಡುವೆ 7 ಜಿಲ್ಲೆಗಳಿಗಾಗಿ ಸಂಘರ್ಷ ನಡೆಯುತ್ತಿದೆ.

ಈ ಏಳು ಜಿಲ್ಲೆಗಳನ್ನು ನಾಗರ್ನೋಕ್-ಕರಭಾಕ ಎಂದು ಗುರುತಿಸಲಾಗಿದ್ದು ಇವು ಎರಡು ದೇಶಗಳ ಸಾಂಸ್ಕೃತಿಕ ಕೇಂದ್ರಗಳಾಗಿವೆ. ಈ ಪ್ರದೇಶಕ್ಕಾಗಿ ಎರಡು ದೇಶಗಳು ಸಂಘರ್ಷಕ್ಕೆ ಇಳಿದಿವೆ. 

ಅರ್ಮೇನಿಯಾವನ್ನು ರಷ್ಯಾ ಬೆಂಬಲಿಸುತ್ತಿದ್ದು ಅಜರ್ ಬೈಜನ್ ಅನ್ನು ಟರ್ಕಿ ಬೆಂಬಲಿಸುತ್ತಿದೆ. ಟರ್ಕಿ ನ್ಯಾಟೋ ದೇಶವಾಗಿದ್ದು ಈ ಹಿನ್ನೆಲೆಯಲ್ಲಿ ರಷ್ಯಾ ಮತ್ತು ನ್ಯಾಟೋ ಪಡೆಗಳ ನಡುವೆ ಮೂರನೇ ಮಹಾಯುದ್ಧ ನಡೆಯಬಹುದು ಎಂದು ವಿದೇಶಿ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ.

ಇದೇ ವೇಳೆ, ಅಜರ್ ಬೈಜನ್ ಸೇನೆಯ ಯುದ್ಧ ಟ್ಯಾಂಕರನ್ ಅನ್ನು ಧ್ವಂಸ ಮಾಡಿರುವ ವಿಡಿಯೋವನ್ನು ಅರ್ಮೇನಿಯಾ ಬಿಡುಗಡೆ ಮಾಡಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಿಳಾ ಮೀಸಲಾತಿ ಮಸೂದೆ ವಿರೋಧಿಸುವವರು ಭಾರಿ ಬೆಲೆ ತೆರಬೇಕಾಗುತ್ತದೆ: ವಿಪಕ್ಷಗಳಿಗೆ ಪ್ರಧಾನಿ ಮೋದಿ ವಾರ್ನಿಂಗ್! Video

ಹೊಸ ಇತಿಹಾಸ ಸೃಷ್ಟಿಸಿದ ಬಾಬರ್ ಅಜಮ್; ಕೊಹ್ಲಿ ದಾಖಲೆ ಉಡೀಸ್: ಪಾಕಿಸ್ತಾನದ ನಂ.1, ಏಷ್ಯಾದ ನಂ.2, ವಿಶ್ವದ ನಂ.3!

ಕಾಂಗ್ರೆಸ್ ಅವಧಿಯಲ್ಲಿ ಆಂಧ್ರ ವಿಭಜನೆ ಭಾರತ-ಪಾಕ್ ವಿಭಜನೆಗಿಂತ ಕೆಟ್ಟದಾಗಿತ್ತು- ತೇಜಸ್ವಿ ಸೂರ್ಯ ವಾಗ್ದಾಳಿ; ತೆಲಂಗಾಣ ರಾಜಕಾರಣಿಗಳಿಂದ ಟೀಕೆ

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ: ಹರಿಯಾಣದ 5 ​​ಶಾಸಕರನ್ನು ಅಮಾನತುಗೊಳಿಸಿದ ಕಾಂಗ್ರೆಸ್

ಮಹಿಳೆ ಮೇಲೆ ಅತ್ಯಾಚಾರ: ಬಿಜೆಪಿ ಕೌನ್ಸಿಲರ್ ಮಗನ ವಿರುದ್ಧ ಕೇಸ್ ದಾಖಲು; ಆರೋಪಿ ಪರಾರಿ

SCROLL FOR NEXT