ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ 
ವಿದೇಶ

ಕೊರೋನಾ ಅಂತ್ಯಕ್ಕೆ ಇನ್ನೂ ಬಹು ದೂರ ಕ್ರಮಿಸಬೇಕಿದೆ: ಡಬ್ಲ್ಯುಎಚ್ ಒ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಎಚ್ಚರಿಕೆ

ಕೊರೋನಾ ಸಾಂಕ್ರಾಮಿಕ ನಿಭಾಯಿಸಲು ವಿಶ್ವದ ರಾಷ್ಟ್ರಗಳು ಇನ್ನಿಲ್ಲದ ಕಷ್ಟ ಪಡುತ್ತಿವೆ. ಕೊರೋನಾ ಎದುರಿಸುವಲ್ಲಿ  ಸಾಕಷ್ಟು ಗೊಂದಲಗಳಿವೆ. ಮನುಷ್ಯರ  ಬೇಜವಾಬ್ದಾರಿತನದಿಂದಾಗಿ ಸಾಂಕ್ರಾಮಿಕ ಅಂತ್ಯಗೊಳ್ಳಲು ನಾವು ಇನ್ನು ಬಹು ದೂರ  ಕ್ರಮಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಎಚ್ಚರಿಕೆ ನೀಡಿದ್ದಾರೆ.

ಜಿನಿವಾ: ಕೊರೋನಾ ಸಾಂಕ್ರಾಮಿಕ ನಿಭಾಯಿಸಲು ವಿಶ್ವದ ರಾಷ್ಟ್ರಗಳು ಇನ್ನಿಲ್ಲದ ಕಷ್ಟ ಪಡುತ್ತಿವೆ. ಕೊರೋನಾ ಎದುರಿಸುವಲ್ಲಿ  ಸಾಕಷ್ಟು ಗೊಂದಲಗಳಿವೆ. ಮನುಷ್ಯರ  ಬೇಜವಾಬ್ದಾರಿತನದಿಂದಾಗಿ ಸಾಂಕ್ರಾಮಿಕ ಅಂತ್ಯಗೊಳ್ಳಲು ನಾವು ಇನ್ನು ಬಹು ದೂರ  ಕ್ರಮಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಎಚ್ಚರಿಕೆ ನೀಡಿದ್ದಾರೆ.

ಅತ್ಯಾಧುನಿಕ ವೈದ್ಯಕೀಯ ಕ್ರಮಗಳ ಮೂಲಕ ಕೆಲ ತಿಂಗಳ ಅವಧಿಯಲ್ಲಿ ಕೊರೋನಾ ಸಾಂಕ್ರಾಮಿಕ ನಿಯಂತ್ರಿಸಬಹುದು ಎಂಬುದು  ದೃಢಪಟ್ಟಿದೆ. ಈ ವರ್ಷದ ಮೊದಲ ಎರಡು ತಿಂಗಳ ಅಂಕಿ ಅಂಶ ನೋಡಿದರೆ ಅದು ಅರ್ಥವಾಗುತ್ತದೆ ಎಂದು ಅವರು ಹೇಳಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಸಾವು, ಹೊಸ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ ಎಂದು ಟೆಡ್ರೊಸ್ ವಿವರಿಸಿದ್ದಾರೆ. ವೈರಸ್ ಅನ್ನು ನಿಯಂತ್ರಿಸಬಹುದು ಹಾಗೂ ರೂಪಾಂತರಿಗಳನ್ನು ತಡೆಯಬಹುದು ಎಂಬುದು  ಸ್ಪಷ್ಟವಾಗಿದೆ. 

ಆದರೆ ಕಳೆದ ಎರಡು ವಾರಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 9ರಷ್ಟು ಹೆಚ್ಚಳ, ಸಾವುಗಳಲ್ಲಿ ಶೇ. 5ರಷ್ಟು ಹೆಚ್ಚಳ ಕಂಡುಬಂದಿದೆ. ಕೆಲವು ದೇಶಗಳಲ್ಲಿ ಕೊರೊನಾ ಹೆಚ್ಚಳಗೊಂಡಿದ್ದರೂ, ನೈಟ್ ಕ್ಲಬ್ ಗಳು, ರೆಸ್ಟೋರೆಂಟ್ ಗಳು ಹಾಗೂ ಮಾರುಕಟ್ಟೆಗಳು ಜನ ದಟ್ಟಣಿಯಿಂದ ತುಂಬಿ ಹೋಗಿವೆ. ಜನರ ಬೇಜವ್ದಾರಿತನ ತೊಲಗಬೇಕು ಎಂದು ಅವರು ಹೇಳಿದ್ದಾರೆ.
 
ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ನಂತರವೂ ಹಲವಾರು ಸಮಸ್ಯೆಗಳು ಪ್ರಾರಂಭವಾಗುತ್ತವೆ ಎಂದು ಸಂಶೋಧನೆ  ಹೇಳುತ್ತದೆ. ಕೊರೋನಾ ಸೋಂಕಿನಿಂದ ಚೇತರಿಸಿಕೊಳ್ಳುವ  ಪ್ರತಿ ಮೂವರಲ್ಲಿ ಒಬ್ಬರು ನರ  ಸಮಸ್ಯೆಗಳು ಅಥವಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಕೊರೋನಾ ಸೋಂಕು ತಗುಲಿದ ಮೊದಲ ಆರು ತಿಂಗಳಲ್ಲಿ ಸುಮಾರು ಶೇ. 34ರಷ್ಟು ಮಂದಿಯ ಮೇಲೆ ಪ್ರಭಾವ  ಉಂಟಾಗಿದೆ.   

ಕೊರೋನಾದಿಂದ ಚೇತರಿಸಿಕೊಂಡ ಶೇ. 17 ಮಂದಿಯಲ್ಲಿ ಆತಂಕ ಶೇ. 14ರಷ್ಟು ಜನರಲ್ಲಿ ಮೂಡ್ ಬದಲಾವಣೆ ಸಮಸ್ಯೆ  ಎದುರಿಸುತ್ತಿದ್ದಾರೆ.  ಶೇ. 13ರಷ್ಟು ಜನರು ಮೊದಲ ಬಾರಿಗೆ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಸೆರೆಬ್ರಲ್ ರಕ್ತಸ್ರಾವ ಶೇ.0.6 ಪಾರ್ಶ್ವವಾಯು ಶೇ.2.1 ಹಾಗೂ ಮರೆವು  ಶೇ. 0.7 ರಷ್ಟು ಮಂದಿಯಲ್ಲಿ ಕಂಡುಬರುತ್ತದೆ ಎಂದು ಸಂಶೋಧನೆ  ಹೇಳಿದೆ.

ಜ್ವರ ಮತ್ತು ಇತರ ಉಸಿರಾಟದ ಸೋಂಕುಗಳಿಗಿಂತ ಕೊರೊನಾ ಹೆಚ್ಚು ಅಪಾಯಕಾರಿ ಎಂದು ಸಂಶೋಧಕರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT