ವಿದೇಶ

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಾಧ್ಯವಾದ ಎಲ್ಲಾ ನೆರವು ನೀಡುವುದಾಗಿ ಚೀನಾ ಭರವಸೆ

Srinivasamurthy VN

ಬೀಜಿಂಗ್: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಉನ್ನತ ಮಟ್ಟದ ನೆರವು ನೀಡಲು ಚೀನಾ ಸರ್ಕಾರ ಸಿದ್ಧ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.

ಈ ಕುರಿತಂತೆ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ವಾಂಗ್ ಯೀ ಅವರು, 'ಕೋವಿಡ್-19 ವಿರುದ್ಧದ ಹೋರಾಟಕ್ಕೆ ಚೀನಾ ಸದಾ ಬೆಂಬಲವಾಗಿ ನಿಲ್ಲಲ್ಲಿದ್ದು, ಚೀನಾದಲ್ಲಿ ನಿರ್ಮಾಣವಾಗುತ್ತಿರುವ ಕೊರೋನಾ ಸೋಂಕು ನಿಗ್ರಹ ವಸ್ತುಗಳು ಭಾರತಕ್ಕೆ ವೇಗವಾಗಿ ರವಾನೆಯಾಗುವ ಕುರಿತು ಕ್ರಮ  ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. 

ಇದೇ ವಿಚಾರವಾಗಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಬರೆದ ಪತ್ರ ಕೂಡ ಬರೆದಿರುವ ವಾಂಗ್ ಯೀ, 'ಕೊರೋನಾ ವೈರಸ್ ಮಾನವಕುಲದ ಸಾಮಾನ್ಯ ಶತ್ರುವಾಗಿದ್ದು, ಚೀನಿಯರು ಭಾರತ ಎದುರಿಸುತ್ತಿರುವ ಈ ಸಮಸ್ಯೆಗೆ ಪ್ರಾಮಾಣಿಕ ಸಹಾನುಭೂತಿ ವ್ಯಕ್ತಪಡಿಸುತ್ತಾರೆ. ಈ ಸಾಂಕ್ರಾಮಿಕದ  ವಿರುದ್ಧದ ಹೋರಾಟಕ್ಕೆ ಅಂತಾರಾಷ್ಟ್ರೀಯ ಸಮುದಾಯದ ಏಕೀಕೃತ ಪ್ರತಿಕ್ರಿಯೆಗಾಗಿ ಒಗ್ಗಟ್ಟು ಮತ್ತು ಸಮನ್ವಯದ ಅಗತ್ಯವಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಚೀನಾ ಭಾರತ ಸರ್ಕಾರಕ್ಕೆ ಬೆಂಬಲ ನೀಡುತ್ತಾರೆ ಎಂದು ಹೇಳಿದ್ದಾರೆ.

ಭಾರತದ ಹೋರಾಟಕ್ಕೆ ಚೀನಾ ಉನ್ನತ ಮಟ್ಟದ ಬೆಂಬಲ ನೀಡಲಿದೆ. ಭಾರತಕ್ಕೆ ಅಗತ್ಯವಿರುವ ವೈದ್ಯಕೀಯ ನೆರವು ನೀಡಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮುಂದುವರಿಸುತ್ತದೆ. ಭಾರತ ಸರ್ಕಾರದ ನಾಯಕತ್ವದಲ್ಲಿ, ಭಾರತೀಯ ಜನರು ಖಂಡಿತವಾಗಿಯೂ ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ  ಎದುರಿಸಲಿದ್ದಾರೆ ಮತ್ತು ಭಾರತ ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 

SCROLL FOR NEXT