ವಿದೇಶ

ಜಾಗತಿಕವಾಗಿ ನಾಲ್ಕು ಮಿಲಿಯನ್ ಹೊಸ ಕೊರೋನಾ ಪ್ರಕರಣಗಳು ವರದಿ: ಡಬ್ಲ್ಯೂಎಚ್ ಒ

Nagaraja AB

ಜಿನಿವಾ: ಕಳೆದ ವಾರದಲ್ಲಿ ಜಾಗತಿಕವಾಗಿ ನಾಲ್ಕು ಮಿಲಿಯನ್ ಗೂ ಹೆಚ್ಚು ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ, ಮಧ್ಯಪ್ರಾಚ್ಯ ಮತ್ತು ಏಷ್ಯಾದಲ್ಲಿ ಬಹುತೇಕ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ಕುರಿತ ವಾರದ ವರದಿಯಲ್ಲಿ ಹೇಳಿದೆ.

ತಿಂಗಳ ನಂತರ ಸೋಂಕು ಹೆಚ್ಚಾಗುತ್ತಿದೆ. ಆದಾಗ್ಯೂ, ವಿಶ್ವದಾದ್ಯಂತ ಸಾವಿನ ಸಂಖ್ಯೆ ಶೇ.8 ರಷ್ಟು ಕುಸಿತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಹೇಳಿದೆ. ಆದಾಗ್ಯೂ, ಮಧ್ಯಪ್ರಾಚ್ಯ ಮತ್ತು ಏಷ್ಯಾದಲ್ಲಿ, ಸಾವುಗಳು ಮೂರನೇ ಒಂದು ಭಾಗಕ್ಕಿಂತ ಹೆಚ್ಚಾಗಿದೆ. ಕಳೆದ ವಾರ  ಅಮೆರಿಕ, ಭಾರತ, ಇಂಡೋನೇಷ್ಯಾ , ಬ್ರೆಜಿಲ್ ಮತ್ತು ಇರಾನ್ ನಲ್ಲಿ ಹೆಚ್ಚಿನ ಸಂಖ್ಯೆಯ ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದೆ.

ಭಾರತದಲ್ಲಿ ಮೊದಲಿಗೆ ಕಾಣಿಸಿಕೊಂಡ ಡೆಲ್ಟಾ ರೂಪಾಂತರದ ಪ್ರಕರಣಗಳು ಇದೀಗ 130 ಕ್ಕೂ ಹೆಚ್ಚು ದೇಶಗಳಲ್ಲಿ ಸುಲಭವಾಗಿ ಹರಡುತ್ತಿದೆ. ಸುಮಾರು ಒಂದು ತಿಂಗಳ ನಂತರ ಪ್ರಕರಣಗಳು ಹೆಚ್ಚಾಗುತ್ತಿದ್ದು,  ಬ್ರಿಟನ್ ಮತ್ತು ಸ್ಪೇನ್ ನಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯನ್ನು ಉಲ್ಲೇಖಿಸಿದ್ದು, ಯೂರೋಪಿಯನ್ ವಲಯದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡಾ 9 ರಷ್ಟು ಕುಸಿತವಾಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. 

ಕಳೆದ ತಿಂಗಳು ಎಲ್ಲಾ ಕೋವಿಡ್-19 ನಿರ್ಬಂಧ ಸಡಿಲಗೊಳಿಸಿ ಟೀಕೆಗೆ ಗುರಿಯಾಗಿದ್ದ ಬ್ರಿಟನ್ ನಲ್ಲಿ ಸುಮಾರು ಶೇ.60 ರಷ್ಟು ಜನರಿಗೆ ಸಂಪೂರ್ಣವಾಗಿ ಲಸಿಕೆ ಹಾಕಲಾಗಿದೆ.

SCROLL FOR NEXT