ಸಂಗ್ರಹ ಚಿತ್ರ 
ವಿದೇಶ

ಮಹಿಳಾ ಸೈನಿಕರ ಕನ್ಯತ್ವ ಪರೀಕ್ಷೆ ರದ್ದು: ಇಂಡೊನೇಷ್ಯಾ ನಿರ್ಧಾರ

7 ವರ್ಷಗಳ ಹಿಂದೆಯೇ ಕನ್ಯತ್ವ ಪರೀಕ್ಷೆಗೆ ವೈಜ್ಞಾನಿಕ ಆಧಾರವಿಲ್ಲ ಎಂದು ಘೋಷಿಸಿತ್ತು. ಅದರ ಹೊರತಾಗಿಯೂ ಇಂಡೊನೇಷ್ಯಾ ಸೇನೆ ತನ್ನ ಮಹಿಳಾ ಸೈನಿಕರಿಗೆ ಕನ್ಯತ್ವ ಪರೀಕ್ಷೆಯನ್ನು ನಡೆಸುತ್ತಿತ್ತು. 

ಜಕಾರ್ತ: ಇಂಡೊನೇಷ್ಯಾ ಸೇನೆ ಹೊಸದಾಗಿ ಸೇನೆಗೆ ನಿಯುಕ್ತರಾದ ಮಹಿಳಾ ಸೈನಿಕರಿಗೆ ಕಡ್ಡಾಯವಾಗಿ ನಡೆಸುತ್ತಿದ್ದ ಕನ್ಯತ್ವ ಪರೀಕ್ಷೆಯನ್ನು ರದ್ದು ಪಡಿಸಿದೆ. ಈ ನಿರ್ಧಾರವನ್ನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಸ್ವಾಗತಿಸಿದೆ. 

7 ವರ್ಷಗಳ ಹಿಂದೆಯೇ ಕನ್ಯತ್ವ ಪರೀಕ್ಷೆಗೆ ವೈಜ್ಞಾನಿಕ ಆಧಾರವಿಲ್ಲ ಎಂದು ಘೋಷಿಸಿತ್ತು. ಅದರ ಹೊರತಾಗಿಯೂ ಇಂಡೊನೇಷ್ಯಾ ಸೇನೆ ತನ್ನ ಮಹಿಳಾ ಸೈನಿಕರಿಗೆ ಕನ್ಯತ್ವ ಪರೀಕ್ಷೆಯನ್ನು ನಡೆಸುತ್ತಿತ್ತು. 

ಈ ಬಗ್ಗೆ ಸೇನಾ ಮುಖ್ಯಸ್ಥ ಅಂದಿಕಾ ಪೆರ್ಕಸಾ ಮಾಧ್ಯಮದ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ. ಇದುವರೆಗೂ ಆ ದೇಶದ ಸೇನೆಗೆ ಸೇರ್ಪಡೆಗೊಂಡ ಮಹಿಳೆಯರ ಕನ್ಯಾ ಪೊರೆ ಕಳಚಿಕೊಂಡಿದೆಯೋ ಇಲ್ಲವೋ ಎಂಬುದನ್ನು ಕೈ ಬೆರಳುಗಳಿಂದಲೇ ಪರೀಕ್ಷೆ ಕೈಗೊಳ್ಳುವ ಮೂಲಕ ಕನ್ಯತ್ವ ಪರೀಕ್ಷೆ ನಡೆಸಲಾಗುತ್ತಿತ್ತು. 

ಈ ಬಗೆಯ ಪರೀಕ್ಷೆಯಲ್ಲಿ ಯಾವುದೇ ಹುರುಳಿಲ್ಲ, ಅದರಿಂದ ದೊರೆಯುವ ಫಲಿತಾಂಶ ದೋಷಪೂರಿತವಾದುದು ಎಂದು ವಿಶ್ವ ಆರೋಗ್ಯ ಸಂಸ್ಥೆ 7 ವರ್ಷಗಳ ಹಿಂದೆಯೇ ಘೋಷಿಸಿತ್ತು. ಜಗತ್ತಿನಾದ್ಯಂತ ಕನ್ಯತ್ವ ಪರೀಕ್ಷೆಯ ಹೆಸರಿನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿತ್ತು. ಇದನ್ನು ಮನಗಂಡು ವಿಶ್ವ ಆರೋಗ್ಯ ಸಂಸ್ಥೆ ಆ ಘೋಷಣೆ ಹೊರಡಿಸಿತ್ತು.

ಇಂಡೊನೇಷ್ಯಾದ ವಾಯುಪಡೆ ಮತ್ತು ನೌಕಾಪಡೆಗಳಲ್ಲಿ ಕನ್ಯತ್ವ ಪರೀಕ್ಷೆ ಚಾಲ್ತಿಯಲ್ಲಿದ್ದು, ಅಲ್ಲಿಯೂ ಆ ಪರೀಕ್ಷೆಯನ್ನು ರದ್ದುಗೊಳಿಸಬೇಕೆನ್ನುವ ಕೂಗು ಎದ್ದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವರ್ಷಾಂತ್ಯದ ವೇಳೆಗೆ ಭಾರತ ರಷ್ಯಾದ ತೈಲ ಆಮದನ್ನು 'ಹಂತ ಹಂತವಾಗಿ ನಿಲ್ಲಿಸಲಿದೆ ': ಟ್ರಂಪ್ ಪುನರುಚ್ಛಾರ

ತಂದೆ ರಾಜಕೀಯ ಜೀವನ ಮುಗಿಯಿತು; ಯತೀಂದ್ರ ಹೇಳಿಕೆಯಿಂದ ಸಂಚಲನ, ರಾಜಕೀಯ ಜೀವನದ ಕೊನೆಗಾಲದಲ್ಲೂ ಡಿಕೆಶಿಗೆ ಚೆಕ್‌ಮೇಟ್ ನೀಡಲು ಸಿದ್ದು ಟೀಮ್ ಮುಂದು..!

ಬ್ಯುಸಿನೆಸ್ ಕಾರಿಡಾರ್'ಗಾಗಿ ಭೂಮಿ ಕಳೆದುಕೊಂಡವರಿಗೆ 3 ಪಟ್ಟು ಪರಿಹಾರ: ರಾಜ್ಯ ಸರ್ಕಾರ

'ಮಹಾತ್ಮ ಗಾಂಧಿ ಕೂತ ಸ್ಥಾನದಲ್ಲಿ ಇಂದು ಖರ್ಗೆ ಕೂತಿದ್ದಾರೆ: ಅಡ್ವಾಣಿ ಸಾಧ್ಯವಿಲ್ಲ ಎಂದಿದ್ದನ್ನು ಖರ್ಗೆ ಮಾಡಿ ತೋರಿಸಿದ್ದಾರೆ'

ವಂಚನೆ ಪ್ರಕರಣದಲ್ಲಿ ದೋಷಿಯಾಗಿದ್ದ RJD ಮಾಜಿ ಶಾಸಕ ಅನಿಲ್ ಸಹಾನಿ BJP ಸೇರ್ಪಡೆ

SCROLL FOR NEXT